ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್, ತಿಮಿಂಗಿಲನ್ನು ಪಕ್ಕದಲ್ಲೇ ಕೂರಿಸಿಕೊಂಡಿದ್ದಾರೆ – ಎಚ್.ಡಿ.ಕೆ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಗೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಂತ್ರಿ ಎಚ್,ಡಿ. ಕುಮಾರಸ್ವಾಮಿಯವರು ಗೃಹ ಸಚಿವ ಜಿ.ಪರಮೇಶ್ವರವರಿಗೆ ತಿರುಗೇಟನ್ನು ನೀಡಿದ್ದಾರೆ. ಸಂಸದ್ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತಿಮಿಂಗಲ ಯಾರೆಂದು ಗೊತ್ತಿದ್ದರೆ ಬಹಿರಂಗ ಪಡಿಸಲಿ, ಮಾಹಿತಿ ಇದ್ದರೂ ಹೇಳದಿರುವುದು ದೊಡ್ಡ ತಪ್ಪು ಎಂದು ಗೃಹ ಸಚಿವರಾದ ಡಾ: ಜಿ.ಪರಮೇಶ್ವರರವರು ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಎಚ್.ಡಿ.ಕುಮಾರಸ್ವಾಮಿಯವರು ಡೊಡ್ಡ ತಿಮಿಂಗಲ ಯಾವುದು ಎಂದು ನನಗಿಂತ ಚೆನ್ನಾಗಿ ಗೃಹ ಸಚಿವ ಪರಮೇಶ್ವರರಿಗೇ ಗೊತ್ತು. ಅವರು ತಿಮಿಂಗಿಲಗಳನ್ನು ಪಕ್ಕದಲ್ಲೇ ಕೂರಿಸಿಕೊಂಡಿದ್ದಾರೆ”. ನಿಮ್ಮ ತಂಗಿ ತಾಯಂದಿರನ್ನಾದರೂ ನೆನಪು ಮಾಡಿಕೊಂಡು ಹೆಣ್ಣು ಮಕ್ಕಳ ಮಾರ್ಯಾದೆ ತೆಗೆಯದೆ ಈ ತನಿಖೆಯನ್ನು ಸರಿಯಾಗಿ ಮಾಡಿ ಎಂದು ನಮ್ಮ ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಹೇಳಿದ್ದೇನೆ.. ಎಸ್.ಐ.ಟಿ ಸರಿಯಾಗಿ ತನಿಖೆ ನಡೆಸಿದ್ದರೆ ತಿಮಿಂಗಲ ಹತ್ತೇ ನಿಮಿಷದಲ್ಲಿ ಸಿಗುತ್ತಿತ್ತು. ಸರಿಯಾಗಿ ತನಿಖೆ ನಡೆಯುತ್ತಿದೆಯೇ ಎಂದು ಗೃಹ ಸಚಿವರೇ ಹೇಳಬೇಕು ಎಂದು ವ್ಯಂಗ್ಯಮಾಡುವ ಮೂಲಕ ಎಂದು ತಿರುಗೇಟು ನೀಡಿದರು.

ಇದೇ ವೇಳೆ ವಿಡಿಯೋ ವೈರಲ್ ಮಾಡಿದವರ ಬಗ್ಗೆ ಕಿಡಿಕಾರಿದರು. ವಿಡಿಯೋ ಜಗಜ್ಜಾಹೀರು ಮಾಡಿ ಬೀದಿಗೆ ತಂದವರ ಬಗ್ಗೆ ತಿನಿಖೆ ನಡೆದಿದೆಯೇ? ಜಗಜ್ಜಾಹೀರು ಮಾಡಿದವನು ಆರಾಮವಾಗಿ ಖಾಸಗಿ ಚಾನೆಲ್ ಮುಂದೆ ಸಂದರ್ಶನ ಕೊಡುತ್ತಿದ್ದಾನೆ. ಒಂದು ವಾರದಲ್ಲಿ ಸಿಗುತ್ತಾನೆ ಎಂದು ಮಂಡ್ಯ ಶಾಸಕರು ಹೇಳುತ್ತಾರೆ. ಹಾಗಾದರೇ ತನಿಖಾ ವರದಿ ಮಂಡ್ಯ ಶಾಸಕರಿಗೆ ಹೋಗುತ್ತದೆಯೇ ಹೊರತು ಪರಮೇಶ್ವರಗೆ ಅಲ್ಲ. ಗೃಹ ಸಚಿವರ ಕೆಲಸವನ್ನು ಪರಮೇಶ್ವರ ಅವರ ಪಕ್ಕದಲ್ಲಿ ಕೂತಿರುವವರು ನೋಡಿ ಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

H D Kumarswami

ಭ್ರಷ್ಟಾಚಾರದ ಪ್ರಕರಣಗಳಿಗೆ ಕ್ರಮ ಕೈಗೊಳ್ಳಲು ಈ ಸರ್ಕಾರದಿಂದ ಸಾಧ್ಯವಿಲ್ಲ. ಅದಕ್ಕಾಗಿ ಪೆನ್ ಡ್ರೈವ್ ಕೊಡುತ್ತಿಲ್ಲ.

ನನ್ನ ಬಳಿ ಭ್ರಷ್ಟಾಚಾರದ ಕುರಿತು ಮಾಹಿತಿ ಇರುವ ಪೆನ್ ಡ್ರೈವ್ ಇದೆ. ಅದನ್ನು ನಿಮಗೆ ಕೊಡುತ್ತೇನೆ. ಕ್ರಮ ಕೈಗೊಳ್ಳುವ ತಾಕತ್ತು ನಿಮಗಿದೆಯಾ? ಎಂದು ಎಚ್.ಡಿ.ಕುಮಾರಸ್ವಾಮಿಯವರು ಸಿ.ಎಂ  ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ದಾರೆ.  ಸಿ.ಎಂ ಸಿದರಾಯ್ಯ ಅವರು ಕುಮಾರಸ್ವಾಮಿ ಅವರದ್ದು ಹಿಟ್  ಆ್ಯಂಡ್ ರನ್ ಕೇಸ್ ಎಂದು ಹೇಳಿದ್ದರು, ಈ ಹೇಳಿಕೆಗೆ ಸಂಬಂಧಿಸಿದಂತೆ ಎಚ್.ಡಿ.ಕುಮಾರಸ್ವಾಮಿಯವರು ಗುರುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಈ ಸರ್ಕಾರದಲ್ಲಿ ಅಧಿಕಾರಿಗಳು ಹಣ ಹೊಂದಿಸಲು ಯಾವ ತರಹ ಒದ್ದಾಡುತ್ತಿದ್ದಾರೆಂದು ನನಗೆ ಗೊತ್ತಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಾರಾ? ಎಂದು ತಿರುಗೇಟು ನೀಡಿದರು. ನನ್ನದು ಹಿಟ್ ಆ್ಯಂಡ್ ರನ್ ಕೇಸ್ ಎಂದು ಸಿ.ಎಂ ಆರೋಪಿಸುತ್ತಾರೆ. ಈ ಹಿಂದೆ ದಾಖಲೆಗಳ ಸಮೇತ ನಾನು ಮಾಡಿದ ಆರೋಪಗಳಿಗೆ ಅವರು ಎಷ್ಟು ಕ್ರಮ ಕೈಗೊಂಡಿದ್ದಾರೆಂದು ಪ್ರಶ್ನಿಸಿದರು. ಭ್ರಷ್ಟಾಚಾರದ ಪ್ರಕರಣಗಳಿಗೆ ಕ್ರಮ ಕೈಗೊಳ್ಳಲು ಈ ಸರ್ಕಾರದಿಂದ ಸಾಧ್ಯವಿಲ್ಲ. ಅದಕ್ಕಾಗಿ ಪೆನ್ ಡ್ರೈವ್ ಕೊಡುತ್ತಿಲ್ಲ ಎಂದು ಹೇಳಿದರು.

ದೇವೆಗೌಡರ 92ನೇ ಜನ್ಮದಿನ ಆಚರಣೆ ಇಲ್ಲ

ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಇನ್ನೂ ಪ್ರಜ್ವಲ್ ರೇವಣ್ಣ ಎಲ್ಲಿದ್ದಾನೆಂದು ತಿಳಿಯುತ್ತಿಲ್ಲ. ಪ್ರಜ್ವಲ್ ರೇವಣ್ಣನ ಹುಡುಕಾಟಕ್ಕೆ ಎಸ್.ಐ.ಟಿ ಸತತ ಪ್ರಯತ್ನ ಮಾಡುತ್ತಿದೆ. ಇದರ ನಡುವೆಯೇ ಜೆ.ಡಿ.ಎಸ್ ವರಿಷ್ಠ ಎಚ್.ಡಿ.ದೇವೇಗೌಡರವರು ತಮ್ಮ 92ನೇ ಜನ್ಮ ದಿನಾಚಾರಣೆಯನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಹಲವಾರು ಕಾರಣಗಳಿರಬಹುದು ಎಂದು ಮೇಲನೋಟಕ್ಕೆ ಅನಿಸಿದರೂ ಕೂಡ, ಮೂಲ ಕಾರಣ ಸಂಸದ ಪ್ರಜ್ವಲ್ ರವರ ಪೆನ್ ಡ್ರೈವ್ ಕೇಸ್ ಎನ್ನಬಹುದು. ದೇವೇಗೌಡರು ತಮ್ಮ ಹುಟ್ಟುಹಬ್ಬಕೆ ಸಂಬಂಧಿಸಿದಂತೆ ಅವರ ಅಭಿಮಾನಿಗಳಿಗೆ ಮತ್ತು ಜೆ.ಡಿ.ಎಸ್ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾರೆ. ಶನಿವಾರ ತಮ್ಮ ಹುಟ್ಟುಹಬ್ಬವಿದ್ದು, 91 ವರ್ಷ ಪೂರೈಸುತ್ತಿದ್ದೇನೆ. ಕಾರಣಾಂತರಗಳಿಂದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ತಾವೆಲ್ಲರೂ ಇದ್ದಲ್ಲಿಯೇ ಹಾರೈಸಬೇಕು ಎಂದು ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣನ್ನು ಬಿಜೆಪಿ ರಕ್ಷೀಸುತ್ತಿದೆ : ಆಮ್ ಆದ್ಮಿ ಪಕ್ಷ, ಸ್ವಾತಿ ಕುರಿತ ಪ್ರಶ್ನೆಗೆ ಉತ್ತರ ನೀಡಲು ಕೇಜ್ರಿವಾಲ್ ನಕಾರ

ಲಖನೌ : ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದಲ್ಲಿ ಜೆ.ಡಿ.ಎಸ್ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಿದ್ದಾರೆ. ಆದರೆ ಅವರಿಗೆ ಬಿಜೆಪಿ ರಕ್ಷಣೆ ನೀಡುತ್ತಿದೆ ಎಂದು ಆರೋಪ ಆಮ್ ಆದ್ಮಿ ಪಕ್ಷ ಆರೋಪ ಮಾಡಿತು. ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆದರೆ ಮೋದಿ ಅವರ ಪರ ಮತ ಯಾಚಿಸಿದರು. ಅಷ್ಟೊಂದು ಜನರು ಮಹಿಳೆಯರು ತೊಂದರೆ ಒಳಗಾಗಿದ್ದರೂ ಅವರ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ ಎಂದು ಬಿಜೆಪಿ ಮತ್ತು ಮೋದಿ ಮೇಲೆ ಆರೋಪ ಮಾಡಿದರು. ಆದರೆ ತನ್ನದೇ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಪ್ರಕರಣದಲ್ಲಿ ಮೌನವಹಿಸಿದ್ದೆ. ಪತ್ರಿಕಾಗೋಷ್ಠಿಯಲ್ಲಿ ಸ್ವಾತಿ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ಕೇಜ್ರಿವಾಲ್ ನೀರಾಕರಿಸಿದರು. ಬಳಿಕ ಈ ಕುರಿತು ಆಪ್ ಸಂಸದ ಸಂಜಯ ಸಿಂಗ್ ಪ್ರತಿಕ್ರಿಯೆ ನೀಡಿದಾದರೂ, ಸ್ವಾತಿ ವಿಷಯದಲ್ಲಿ ನಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಅರೆಸ್ಟ್ ಗೆ ಎಸ್.ಐ.ಟಿ 2 ರೀತಿಯ ಅಸ್ತ್ರ

ಲೈಗಿಂಕ ದೌರ್ಜನ್ಯ ಆರೋಪ ಹೊತ್ತು ವಿದೇಶದಲ್ಲಿ ಕಣ್ಮರೆಯಾಗೆ ಅಡಗಿಕೊಂಡಿರುವ ಹಾಸನದ ಸಂಸದ ಪ್ರಜ್ವಲ್ ಅವರನ್ನು ಬಂದಿಸಲು ಎಸ್.ಐ.ಟಿ. ಎರಡು ಪ್ರಮುಖ ಅಸ್ತ್ರವನ್ನು ಸಿದ್ದಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಎಚ್.ಡಿ.ರೇವಣ್ಣ ವಿರುದ್ಧ ಶೀರ್ಘವೇ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ (ಚಾರ್ಜಶೀಟ್) ಸಲ್ಲಿಸುವುದು.ಅದರಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ನಾಪತ್ತೆಯಾಗಿರುವ ಆರೋಪಿ ಎಂದು ಉಲ್ಲೇಖಿಸುವುದು. ಈ ಆಧಾರದ ಮೇರೆಗೆ ನ್ಯಾಯಾಯಲದಲ್ಲಿ ಬಂಧನ ವಾರೆಂಟ್ ಪಡೆದು ಅವರನ್ನು ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿಗೆ ಮುಂದಾಗುವುದು.

 ಲೈಗಿಂಕ ದೌರ್ಜನ್ಯ ಆರೋಪ ಹೊತ್ತು ವಿದೇಶಕ್ಕೆ ಹೋಗಿದ್ದಾರೆ ಎಂದು ನ್ಯಾಯಾಲಕ್ಕೆ ಮನವಿ ಸಲ್ಲಿಸಿ ಸಂಸದ ಪ್ರಜ್ವಲ್ ಪಾಸ್ ಪೋರ್ಟ್ ರದ್ದತಿ ಕೋರುವುದು. ಪಾಸ್ ಪೋರ್ಟ ರದ್ದಾದರೆ ತಾವಾಗಿಯೇ ಸಂಸದರು ಸ್ವದೇಶಕ್ಕೆ ಮರಳಬಹುದು ಎಂಬುದು ಎಸ್.ಐ.ಟಿಯ ವಿಚಾರವಾಗಿದೆ.

ರೇವಣ್ಣ ಮನೆಯಲ್ಲಿ 3ನೇ ಬಾರಿ ಎಸ್.ಐ.ಟಿ ಮಹಜರ್ : ಜೈಲಿನಿಂದ ಹೊರಬಂದರೂ ಮನೆಯಿಂದ ದೂರ

ಲೈಗಿಂಕ ದೌರ್ಜನ್ಯ ಪ್ರಕರಣ ಸಂಬಂಧ ಮಾಜಿ ಸಚಿವ, ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಮನೆಯಲ್ಲಿ ಮೂರನೇ ಬಾರಿಗೆ ಎಸ್.ಐ.ಟಿ ಅಧಿಕಾರಿಗಳು ಮಹಜರ್ ಮಾಡಿದ್ದಾರೆ. ಬೆಂಗಳೂರಿನ ಬಸವನಗುಡಿ ಸಮೀಪದ ಮನೆಗೆ ಸಂತ್ರಸ್ತೆಯನ್ನು ಕರೆತಂದು ಅಧಿಕಾರಿಗಳು ಮಹಜರ್ ನಡೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರೇವಣ್ಣ ಅವರ ಮನಗೆ ಎರಡು ಬಾರಿ ಕೆಲಸದಾಳು ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ರೇವಣ್ಣ ತುತ್ತಾಗಿದ್ದಾರೆ.
ಇನ್ನೂ ಗುರುವಾರ ಮಧ್ಯಾಹ್ನದವರೆಗೂ ಮಧ್ಯಂತರ ಜಾಮೀನು ಪಡೆದುಕೊಂಡು ಹೊರಬಂದ ನಂತರ ತಮ್ಮ ಸ್ವಂತ ಮನೆಗೆ ಹೋಗದೆ ದೇವೆಗೌಡರ ಮನೆಯಲ್ಲೇ ವಾಸ್ತವ್ಯ ಹೂಡಿದ್ದಾರೆ ಈ ಮೂಲಕ ಮನೆಯಿಂದ ದೂರ ಉಳಯುವ ಕೆಲಸ ಮಾಡಿದ್ದಾರೆ. ದೂರ ಉಳಿಯಲು ಜ್ಯೋತಿಷ್ಯರು ಸಹಲೆ ನೀಡಿದ್ದಾರೆಯೇ ಎಂದು ಅನುಮಾನ ಮೂಡಿದ್ದು, ಇದೇ ಕಾರಣಕ್ಕಾಗಿ ಬಸವನಗುಡಿಯಲ್ಲಿರುವ ತಮ್ಮ ಸ್ವಂತ ಮನಯಿಂದ ದೂರ ಉಳಿದ್ದಾರೆ ಎನ್ನಲಾಗಿದೆ.

https://www.kannadaprabha.com/politics

2 thoughts on “ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್, ತಿಮಿಂಗಿಲನ್ನು ಪಕ್ಕದಲ್ಲೇ ಕೂರಿಸಿಕೊಂಡಿದ್ದಾರೆ – ಎಚ್.ಡಿ.ಕೆ

 1. Hey Students!

  Summer semester’s almost here! Get a head start and grab all your eTextbooks (over 15,000 titles in convenient PDF format!) at Cheapest Book Store. Save BIG on your studies with 20% off using code SUMMERVIBE24.

  Still missing a book? No problem! Submit a request through our system and we’ll add it to our collection within 30 minutes. That’s right, you won’t be left scrambling for materials! ⏱️

  Don’t wait – visit https://m.cheapestbookstore.com today and ace your summer semester!

  Happy Learning!

  Cheapest Book Store

Leave a Reply

Your email address will not be published. Required fields are marked *