ಪ್ರೀತಿ-ಪ್ರೇಮದ ಹೆಸರಿನಲ್ಲೂ ಆನಲೈನ್ ವಂಚನೆ! ಅಂತರಾಜ್ಯ ಸೈಬರ್ ವಂಚಕರನ್ನು ಬಂಧಿಸಿದ ಪೋಲಿಸರು…

Cyber Crime

ಇದೊಂದು ಆನಲೈನ್ ಪ್ರೇಮ ಪ್ರಸಂಗ. ಪ್ರೀತಿ-ಪ್ರೇಮ ಅಂತ ಹದಿಹರೆಯದ ಯುವ ಯುವತಿಯರು ಸಾಮಾಜಿಕ ಜಾಲತಾನಗಳಲ್ಲಿ ಕಾಲಕಳೆಯುತ್ತಿದ್ದಾರೆ. ಆದರೆ ಈಗ ಇದೆ ಪ್ರೀತಿ ಪ್ರೇಮದ ಹೆಸರಿನಲ್ಲಿ ಯುವತಿಯನ್ನು ಯಾಮಾರಿಸಿ ಅವಳಿಂದ 8.29 ಲಕ್ಷ ರೂ.ಗಳನ್ನು ವಂಚಿಸಿದ್ದಾನೆ ಇಲ್ಲೊಬ್ಬ ವಂಚಕ. ಇದು ಕುರುಡು ಪ್ರೀತಿಯೋ ಅಥವಾ ಈಗೀನ ಯುವ ಪೀಳಿಗೆಯಲ್ಲಿರುವ ಅತಿಯಾದ ನಂಬಕೆಯೋ ಎಂದು ತಿಳಿಯದು. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗ ಮಾಡಿಕೊಂಡಿರುವ ಬಾಗಲಕೋಟೆ ಯುವತಿ ಪ್ರೇಮಿಗೆ ಮರುಳಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾಳೆ.

ಬಾಗಲಕೋಟೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಶ್ರೀ ಅಮರನಾಥ ರಡ್ಡಿಯವರು ಉದಯವಾಣಿ ಪತ್ರಿಕೆಗೆ ಇದನ್ನು ತಿಳಿಸಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಬಾಗಲಕೋಟೆ ಮೂಲದ 25 ವರ್ಷದ ಯುವತಿ, ವರ್ಕ್ ಫ್ರಂ ಹೋಂ ಇದ್ದಾಗ ಹೈದ್ರಾಬಾದ್ ನ ಮೂಲದ 33 ವರ್ಷದ ಯುವಕನೊಬ್ಬ ಆನಲೈನ್ ನಲ್ಲಿ ಪರಿಚಯ ಆಗಿದ್ದ. ಪರಿಚಯ ಆದ ಒಂದು ವರ್ಷದ ನಂತರ ಯುವಕ ತನ್ನ ನಿಜವಾದ ಬಣ್ಣ ತೋರಿಸಿದ್ದಾನೆ. ಯುವತಿಯ ಬಳಿ ಸಾಕಷ್ಟು ಹಣ ಇರುವುದು ತಿಳಿದಿದ್ದ ಆತ ತನ್ನ ಆರ್ಥಿಕ ಸಮಸ್ಯೆ ನೆಪ ಹೇಳಿ ಆಗಾಗ ಹಣ ಪಡೆದಿದ್ದ. ಆದರೆ ದೊಡ್ಡ ಮಟ್ಟದ ಹಣ ದೋಚುವವರೆಗೂ ಯುವತಿ ಸಾವಿರ ಲೆಕ್ಕದಲ್ಲಿ ಹಣ ಕೊಡುತ್ತಲ್ಲೇ ಬಂದಿದ್ದಳು.

ಹೀಗೆ ದಿನ ಕಳೆದಂತೆ ತಾನು ಪ್ರೀತಿಸುವ ಯುವಕ ಕಷ್ಟದಲ್ಲಿದ್ದಾನೆಂದು ನಂಬಿ ಯುವತಿ ತನ್ನ ಬಳಿ ಇದ್ದ ಹಣ ಅಷ್ಟೇ ಅಲ್ಲದೇ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸಾಲ ಮಾಡಿ ಹಣ ಕೊಟ್ಟಿದ್ದಾಳೆಂದರೆ ಯುವತಿಯು ಎಷ್ಟರ ಮಟ್ಟಿಗೆ ಯುವಕನನ್ನು ನಂಬಿಕರಬೇಕು ಹಾಗೂ ಅವಳು ಸಾಲ ಮಾಡಿ ಹಣ ಕೊಡುತ್ತಾಳೆಂದರೆ ಆನಲೈನ್ ವಂಚಕರು ಎಷ್ಟೊಂದು ನೈಸ್ ಆಗಿ ನಂಬಿಸುತ್ತಾರೆ ಎಂಬುದು ಊಹೆ ಮಾಡಲೂ ಅಸಾಧ್ಯವಾಗಿದೆ. ಮೊದಮೊದಲು ಯುವಕ 5 ರಿಂದ 10 ಸಾವರ ಪಡೆಯುತ್ತಿದ್ದ.

ಯುವಕ ಮೊದಲ ಬಾರಿಗೆ ಹೆಚ್ಚಿನ ಸಮಸ್ಯೆ ಹೇಳಿಕೊಂಡ. ಆಗ ಯುವತಿ ತನ್ನ ಖಾತೆಯಲ್ಲಿದ್ದ 3,84,241 ರೂ.ಗಳನ್ನು ಆತನ ಖಾತೆಗೆ ಹಾಕಿದ್ದಳು. ಮತ್ತೊಮ್ಮೆ ಹಣ ಕೇಳಿದಾಗ ಕೆಲಸದ ಒತ್ತಡದಲ್ಲಿದ್ದ ಯುವತಿ ತನ್ನ ಬ್ಯಾಂಕ್ ಖಾತೆ, ಪಾಸವರ್ಡ್, ಐಡಿ ಎಲ್ಲವನ್ನೂ ಕೊಟ್ಟಿದ್ದಾಳೆ. ಆದರಿಂದಲೇ ಯುವತಿಯ ಖಾತೆಯಿಂದ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಳ್ಳು ಸಹಾಯವಾಗಿತ್ತು. ಯುವತಿಯ ಖಾತೆಯಲ್ಲಿದ್ದ 3.84 ಲಕ್ಷ ರೂ. ಹಣ ಖಾಲಿಯಾದ ಬಳಿಕ ಮತ್ತೆ ಸಮಸ್ಯೆ ಹೇಳಿಕೊಂಡಿದ್ದ. ಎಲ್ಲ ಹಣವನ್ನು ಒಟ್ಟಿಗೇ ಬೇಗ ಕೊಡುವುದಾಗಿ ನಂಬಿಸಿದ್ದ.  ಆತನ ಮಾತಿಗೆ ನಂಬಿದ ಯುವತಿ ಬ್ಯಾಂಕ್ ನಲ್ಲಿ ಸಾಲ ಮಾಡಿ 4,45,723 ರೂ.ಗಳನ್ನು ಅವನ ಖಾತೆಗೆ ಕಳುಹಿದ್ದಾಳೆ. ಹೀಗೆ ಒಟ್ಟೂ 8,29,964 ರೂ.ಗಳನ್ನು ಅವನಿಗೆ ಕೊಟ್ಟಿದ್ದಾಳೆ. ಆದರೆ ಅವನು ಈಗ ಯುವತಿಯ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಕಡೆ ಯುವತಿಗೆ ಹಣವು ಸಿಕ್ಕಿಲ್ಲ. ಆದ ಕಾರಣ ಈ ಪ್ರಕರಣವು ಬಾಗಲಕೋಟೆಯ ಸಿ.ಎ.ಎನ್ ಠಾಣೆಯಲ್ಲಿ ದಾಖಲಾಗಿದೆ.

ಅಂತರಾಜ್ಯ ಸೈಬರ್ ವಂಚಕರನ್ನು ಬಂಧಿಸಿದ ಪೋಲಿಸರು….

ಆನಲೈನ್ ವಂಚನೆಯಲ್ಲಿ ತೊಡಗಿಕೊಂಡಿದ್ದ ನಾಲ್ಕು ಅಂತರಾಜ್ಯ ಆನಲೈನ್ ವಂಚಕರನ್ನು ಬಂಧಿಸುವಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯ ಪೋಲಿಸರು ಯಶಸ್ವಿಯಾಗಿದ್ದಾರೆ. ವಂಚಕರು ದೇಶಾದ್ಯಂತ 502 ವಂಚನೆ ಕೃತ್ಯ ಮಾಡಿದ್ದು ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯಲ್ಲಿರುವ ವೈದ್ಯಾರದ ಡಾ|| ಅನಿರುದ್ಧ ಉಮರ್ಜಿ ಅವರಿಗೆ ಕರೆ ಮಾಡಿದ್ದ ವಂಚಕರ ತಂಡ, ನಿಮಗೆ ಕಾಬೂಲ್ ನಿಂದ ಫಿಡೆಕ್ಸ್ ಕೊರಿಯರ್ ಬಂದಿದ್ದು, ಅದರಲ್ಲಿ ಅಂತರಾಷ್ಟ್ರೀಯ 15 ಸಿಮ್ ಕಾರ್ಡ್ ಗಳು ಹಾಗೂ 9.50 ಗ್ರಾಂ ಎಂಡಿಎಂಎ ಮಾದಕ ವಸ್ತು ಕಳುಹಿಸಲಾಗಿದೆ. ಈ ಬಗ್ಗೆ ಮುಂಬೈನ ನಾರ್ಕೋಟಿಕ್ಸ್ ಕ್ರೈಂ ಶಾಖೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಂಚಕರು ಬೆದರಿಕೆ ಕರೆ ಮಾಡಿದ್ದರು. ಅಪರಾಧ ಕೃತ್ಯದಿಂದ ನಿಮ್ಮನ್ನು ತಪ್ಪಿಸಲು ನಮಗೆ 54 ಲಕ್ಷ ರೂ. ಕೊಡಬೇಕೆಂದು ಬೆದರಿಸಿ ಪಂಜಾಪ್ ನ್ಯಾಷನಲ್ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಿಕೊಂಡಿದ್ದರು. ವಿಜಯಪುರ ಜಿಲ್ಲೆಯಲ್ಲಿಯೇ ಮುಖಣಾಪುರದ ಗ್ರಾಮದ ಬಬನ್ ನಾಮದೇವ ಚವ್ಹಾನ ಎಂಬ ಯುವಕನಿಗೆ ಕಾರ್ಟ್ ಕೆಲಸ ಕೊಡಿಸುತ್ತೇವೆ ಎಂದು ಸುಮಾರು ರೂ.15.00,000 ಗಳನ್ನು ಹಾಕಿಸಿಕೊಂಡಿದ್ದರು.

          ಈ ಎರಡೂ ಪ್ರಕರಣಗಳ ಕುರಿತು ದೂರು ದಾಖಲಿಸಿಕೊಂಡ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ತಕ್ಷಣ ತನಿಖೆ ಆರಂಭಿಸಿತು.  ವಿಜಯಪುರ ಸಿಇಎನ್ ಕ್ರೈಂ ಬ್ರ್ಯಾಂಚ್ ಸಿಪಿಐ ಸುನೀಲಕುಮಾರ ನಂದೇಶ್ವರ ನೇತೃತ್ವದ ತನಿಖಾ ತಂಡವು ಆನಲೈನ್ ವಂಚನೆ ಕೃತ್ಯವನ್ನೇ ಉದ್ಯೋಗ ಮಾಡಿಕೊಂಡಿದ್ದ ನಾಲ್ಕು ಜನರ ತಂಡವನ್ನು ಬಂಧಿಸುವಲ್ಲಿ ಯಶಸ್ಸು ಕಂಡಕೊಂಡಿದೆ.

170 ಬ್ಯಾಂಕ್ ಖಾತೆ, 120 ಸಿಮ್ ಕಾರ್ಡ್ ಖರೀದಿ…!

       ಆನಲೈನ್ ವಂಚನೆಯಲ್ಲಿ ಬಂಧಿತರಾದವರು ಮೂಲತಃ ಹರಿಯಾಣ ರಾಜ್ಯದ ಕುರುಕ್ಷೇತ್ರದ ರಾಜೀವ ವಾಲಿಯಾ, ರಾಜಸ್ಥಾನದ ಉದಯಪುರ ಜಿಲ್ಲೆ ಲಸದಿಯಾ ಮೂಲದ ರಾಕೇಶಕುಮಾರ ಟೈಲರ್, ಉದಯಪುರದ ಕರಣ ಯಾದವ ಮತ್ತು ಸುರೇಂದ್ರ ಸಿಂಗ್ ಎಂಬುದು ತಿಳಿದು ಬಂದಿದೆ. ಬಂಧಿತರು ಸುಮಾರು 502 ವಂಚನೆಯ ಕೃತ್ಯ ಎಸಗಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಬಂಧಿತರು ಆನಲೈನ್ ವಂಚನೆ ಮಾಡುವ ಸಲುವಾಗಿ ಬೇರೆ ಬೇರೆ ವ್ಯಕ್ತಿಗಳ ಹೆಸರಿನಿಂದ ದೇಶದ ವಿವಿಧ ಬ್ಯಾಂಕ್ ಗಳಲ್ಲಿ 170ಖಾತೆಗಳನ್ನು ತೆರೆದಿದ್ದರು. ಆನಲೈನ್ ನಲ್ಲಿ ವಂಚಿಸಿದ ಹಣವನ್ನು ತಮ್ಮ ನಕಲಿ ಖಾತೆಗಳಿಗೆ ಜಮೆ ಮಾಡಿಕೊಳ್ಳುತ್ತಿದ್ದರು. ಹಾಗೂ ಬೇರೆ ಬೇರೆ ವ್ಯಕ್ತಿಗಳ ಹೆಸರಿನಿಂದ 120 ಸಿಮ್ ಕಾರ್ಡ್ ಗಳನ್ನು ಖರೀದಿಸಿದ್ದರು ಎಂದು ಪೊಲೀಸ್ ರ ಮುಂದೆ ಹೇಳಿಕೊಂಡಿದ್ದಾರೆ.

ಅನವಶ್ಯಕ ಲಿಂಕ್: ಕ್ಲಿಕ್ ಮಾಡಿದರೆ ಬ್ಯಾಂಕ್ ಖಾತೆಯಲ್ಲಿನ ಹಣ ಮಾಯ!

          ಇತ್ತೀಚ್ಛೀಗೆ ಮೋಬೈಲ್ ಗಳಲ್ಲಿ ಅನವಶ್ಯಕ ಲಿಂಕ್ ಗಳ ಹಾವಳಿ ಹೆಚ್ಚಾಗಿದೆ. ಅಪ್ಪಿ ತಪ್ಪಿ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಬ್ಯಾಂಕ್ ಖಾತೆಯಲ್ಲಿನ ಹಣ ಮಾಯವಾಗುತ್ತವೆ. ಹೌದು ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇರುವುದನ್ನು ಗಮನಿಸಹುದಾಗಿದೆ. ಸೈಬರ್ ಅಪರಾಧ ತಡೆಗೆ ಸರ್ಕಾರ, ಪೊಲೀಸರ್ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿರುವ ಬೆನ್ನಲ್ಲೇ ಸೈಬರ್ ವಂಚಕರು ಹೊಸ ಹೊಸ ತಂತ್ರಜ್ಞಾನ ಬಳಸೆ ಬ್ಯಾಂಕ್ ಖಾತೆಯಲ್ಲಿನ ಹಣ ಲೂಟಿ ಮಾಡುತ್ತಿದ್ದಾರೆ.

ಸೈಬರ್ ವಂಚಕರು ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್ ಲಿಂಕ್ ಸೃಷ್ಟಿಸಿ ವಂಚನೆ ಎಸಗುತ್ತಿದ್ದಾರೆ. ಕೆನರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸೇರಿ ದೇಶದ ದೊಡ್ಡ ದೊಡ್ಡ ಬ್ಯಾಂಕ್ ಗಳ ಹೆಸರಲ್ಲಿ ವಂಚನೆ ಮಾಡುಲಾಗುತ್ತಿದೆ. ಬ್ಯಾಂಕ್ ಗಳ ಹೆಸರಲ್ಲಿ ಕೆವೈಸಿ ಅಪ್ಡೇಟ್ ಹಾಗೂ ನಕಲಿ ಬ್ಯಾಂಕ್ ಆ್ಯಪ್ ಡೌನಲೋಡ್ ಮಾಡಲು ತಿಳಿಸಿ ನಂತರ ಖಾತೆಯಲ್ಲಿದ್ದ ಹಣ ಖದೀಯುತ್ತಾರೆ. ಆದ ಕಾರಣ ಪ್ರತಿಯೊಬ್ಬರು ಎಚ್ಛೆತ್ತುಕೊಳ್ಳಬೇಕಾಗಿದೆ. ಗೊತ್ತಿಲ್ಲದೆ ಇರುವ ಹಾಗೂ ಅನುಮಾನಸ್ಪಾದ ಬ್ಯಾಂಕಿಂಗ್ ಅಪ್ಲೀಕೇಶನ್ ಗಳನ್ನು ಯಾವುದೇ ಕಾರಣಕ್ಕೂ ಡೌನಲೋಡ್ ಮಾಡಿಕೊಳ್ಳುವುದು, ಇನ್ಟಾಲ್ ಮಾಡಿಕೊಳ್ಳುವುದು ಮಾಡಬೇಡಿ ಎಂದು ಬ್ಯಾಂಕ್ ಗಳು ಹಾಗೂ ಸೈಬರ್ ಪೊಲೀಸರ್ ಎಚ್ಚರಿಕೆ ಕೊಡುತ್ತಿದ್ದಾರೆ. ಒಂದು ವೇಳೆ ಮೋಸ ಹೋಗಿದ್ದರೆ ಕೂಡಲೇ ಸೈಬರ್ ಪೋರ್ಟಲ್ ಅಥವಾ ಸೈಬರ್ ಪೊಲೀಸ್ ರಾಠೆಯಲ್ಲಿ ದೂರು ದಾಖಲಿಸುವಂತೆ ಸಲಹೆ ನೀಡಿದ್ದಾರೆ.

If you click on an unnecessary link, the money in the bank account will disappear!

ಸೈಬರ್ ಕ್ರೈಂ: ಕರ್ನಾಟಕ 2ನೇ ಸ್ಥಾನ

          ಸೈಬರ್ ಕ್ರೈಂನಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ದೇಶದ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರ ನಂ.1 ಸ್ಥಾನದಲ್ಲಿದೆ. ಪೊಲೀಸರ್ ಎಷ್ಟೇ ಜಾಗೃತಿ ಮೂಡಿಸಿದರೂ ಸೈಬರ್ ಜಾಲಕ್ಕೆ ಸಿಕ್ಕು ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐಸಿಸಿಸಿಸಿ) ಕೊಟ್ಟಿರುವ ಮಾಹಿತಿ ಅನ್ವಯ 2021 ರ ಏಪ್ರಿಲ್ 01 ರಿಂದ ಇಲ್ಲಿಯವರೆಗೆ ದೇಶದಲ್ಲಿ 10,300 ಕೋಟಿ ರೂ. ಸೈಬರ್ ಅಪರಾಧದಲ್ಲಿ ಲೂಟಿಯಾಗಿದೆ. ಇದರಲ್ಲಿ ಸೈಬರ್ ಕ್ರೈಂಗೆ ಒಳಗಾದ ತಕ್ಷಣವೇ ದೂರು ಕೊಟ್ಟಿರುವ ಶೇ. 10 ಹಣವನ್ನು ಮಾತ್ರವೇ ಬ್ಯಾಂಕ್ ಖಾತೆಗಳಲ್ಲಿಯೇ ಫ್ರೀಜ್ ಮಾಡಿ, ಕಾನೂನು ಪ್ರಕ್ರಿಯೆಯ ಮೂಲಕ ಸಂತ್ರಸ್ತರಿಗೆ ವಾಸಪ್ ಕೊಡಿಸಲಾಗಿದೆ.https://ksp.karnataka.gov.in

ಸೈಬರ್ ವಂಚಕರು ಹೇಗೆ ವಂಚಿಸ್ತಾರೆ?

ದೊಡ್ಡ ದೊಡ್ಡ ಬ್ಯಾಂಕ್ಗಳ ಲೋಗೋ ಸೃಷ್ಟಿಸಿ ಬ್ಯಾಂಕಿಂಗ್ ಅಪ್ಲಿಕೇಶನ್ ಸೃಷಿ, ಕಸ್ಟಮರ್ ಸರ್ವೀಸ್ ಪಾಯಿಂಟ್ ಎಂಬ ನಕಲಿ ಎಪಿಕೆ ಸೃಷ್ಟಿಸುವುದು, ವಾಟ್ಸಪ್, ಟೆಲಿಗ್ರಾಂ, ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಮಾಡಿಕೊಂಡು ನಿಮ್ಮ ಮೋಬೈಲ್ ಗಳಿಗೆ ನಕಲಿ ಲಿಂಕ್ ಪೈಲ್ ನ್ನು ಕಳುಹಿಸಿ ಅಪ್ಲಿಕೇಶನ್ ಇನಸ್ಟಾಲ್ ಮಾಡಿಸುತ್ತಾರೆ. ಆಧಾರ ಕೆವೈಸಿ, ಪಾನ್ ಕಾರ್ಡ್ ವಿವರ, ನಂಬರ ಅಪ್ಡೇಟ್ ಮಾಡಿಸ್ತಾರೆ. ಮೋಬೈಲ್ ನಲ್ಲಿ ಅಪ್ಲಿಕೇಶನ್ ಇನಸ್ಟಾಲ್ ಆಗುತ್ತಿದ್ದಂತೆ ಖಾತೆ ವಿವರ ಪಡೆಯುತ್ತಾರೆ. ನಂತರ ನೇರವಾಗಿ ನಿಮ್ಮ ಖಾತೆಯಲ್ಲಿನ ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ.

*#67# ಇದಕ್ಕೆ ಡಯಲ್ ಮಾಡಿ ನೋಡಿ…

ವೈರಸ್ ಇರುವ ಬ್ಯಾಂಕಿಂಗ್ ಅಪ್ಲಿಕೇಶನ್ ಲಿಂಕ್ ಡೌನಲೋಡ್ ಮಾಡಿಸಿ, ಹ್ಯಾಕ್ ಮಾಡುವ ಸೈಬರ್ ಖದೀಮರು, ಮೋಬೈಲ್ ನಂಬರ್ ಫಾರ್ವರ್ಡೆಡ್ ಮಾಡಿಕೊಳ್ಳುವ ಮೂಲಕ ಒಟಿಪಿ ಸ್ವೀಕರಿಸಿ ಖಾತೆಗೆ ಕನ್ನ ಹಾಕುತ್ತಾರೆ. ಆದ್ದರಿಂದ ನಿಮ್ಮ ಮೋಬೈಲ್ ನಂಬರ್ ಯಾವುದಕ್ಕೆಲ್ಲ ಪಾರ್ವರ್ಡೆಡ್ ಆಗಿದೆ ಎಂದು ತಿಳಿದುಕೊಳ್ಳಲು *#67# ನಂಬರ್ ಗೆ ಡಯಲ್ ಮಾಡಿ, ಒಂದು ವೇಳೆ ಫಾರ್ವರ್ಡೆಡ್ ಆಗಿದ್ದರೆ ನಿಮಗೆ ಬರುವ ಒಟಿಪಿಗಳು ಸೈಬರ್ ವಂಚಕರಿಗೆ ಹೋಗುತ್ತಿವೆ ಎಂಬುದು ನಿಶ್ಚಿತ. ಫಾರ್ವರ್ಡೆಡ್ ಇದ್ದರೆ ತಕ್ಷಣ #002# ನಂಬರ್ ಗೆ ಡಯಲ್ ಮಾಡಿದರೆ ಯಾವೆಲ್ಲ ಸೇವೆಗಳಿಗೆ ಫಾರ್ವರ್ಡೆಡ್ ಆಗಿದೆಯೋ ಆ ಎಲ್ಲ ಸರ್ವೀಸ್ ಗಳು ಡಿಸೇಬಲ್ ಆಗಲಿವೆ ಎಂದು ಸೈಬರ್ ಪೋಲಿಸರ್ ತಿಳಿಸಿದ್ದಾರೆ. https://www.youtube.com/watch?v=M7bkuMGQm5g

ದ್ವಿತೀಯ ಪಿಯುಸಿ ಪರೀಕ್ಷೆ-3 ಯಾವಾಗ? ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ!

ಸಿಇಟಿ ರಿಸಲ್ಟ್; ಚುನಾವಣೆ ಫಲಿತಾಂಶ ನಂತರ ಘೋಷಣೆ ಸಾಧ್ಯತೆ

ನಿಮ್ಮ ಮೋಬೈಲ್ ಹ್ಯಾಕ್ ಆಗಬಾರದೆಂದರೆ ಏನು ಮಾಡಬೇಕು?

ನಿಮ್ಮ ಮೋಬೈಲ್ ಹ್ಯಾಕ್ ಆಗಬಾರದೆಂದರೆ ಏನು ಮಾಡಬೇಕು? ಮೋಬೈಲ್ ನಲ್ಲಿ ಯಾವ ಯಾವ ಸೆಟ್ಟಿಂಗ್ಸ್ ಗಳನ್ನು ಆನ್ ಮಾಡಬೇಕು ಎಂಬುದನ್ನು ತಿಳಿಯಬೇಕು. ದಿನ ನಿತ್ಯ ನಿಮ್ಮಲ್ಲಿ ನಮ್ಮಲ್ಲಿ ಯಾರಾದರೂ ಒಬ್ಬರು ಮೋಬೈಲ್ ಹ್ಯಾಕ್ ಗೆ ಒಳಗಾಗುತ್ತಲೇ ಇರುತ್ತೇವೆ. ಬ್ಯಾಂಕ್ ಖಾತೆಯಿಂದ ಹಣ ಹೋಗುತ್ತೆ, ಮೋಬೈಲ್ ನಲ್ಲಿರುವ ಪೋಟೊ, ವಿಡಿಯೋ, ವಯಕ್ತಕ ಮಾಹಿತಿಯಗಳು ಹ್ಯಾಕರಗಳ ಪಾಲಾಗುತ್ತವೆ. ಹಾಗಾದರೆ ಈ ಆನಲೈನ್ ಕಳ್ಳರಿಂದ ತಪ್ಪಿಸಿಕೊಳ್ಳುವುದು ಹೇಗೆ? ಮೋಬೈನಲ್ಲಿ ಪೊನಪೇ, ಗೂಗಲ್ ಪೇ ಉಪಯೋಗಿಸುತ್ತಿರುತ್ತೀರಿ. ನಮ್ಮ ಪೋನ್ ಹ್ಯಾಕ್ ಆಗಬಾರದೆಂದರೆ, ಓಟಿಪಿ ಕಳ್ಳತನ ಆಗಬಾರದೆಂದರೆ ಏನು ಮಾಡಬೇಕು?

2 ಪ್ಯಾಕ್ಟರ್ ಅಥೆಂಟಿಕೇಶನ್

        2 ಪ್ಯಾಕ್ಟರ್ ಅಥೆಂಟಿಕೇಶನ್ ಅಥವಾ 2 ಸ್ಟೇಪ್ ವೇರಿಪಿಕೇಶನ್ ಎನ್ನುವುದು ಇದು ಮೊಬೈಲ್ ಸೆಕ್ಯೂರಿಟಿಯ್ ವೈಶಿಷ್ಟ್ಯ ಆಗಿದೆ. ಆದರೆ ಇದನ್ನು ನಮ್ಮಲ್ಲಿ ಬಳಸುವವರು ಕಡಿಮೆ ಜನ. 2 ಪ್ಯಾಕ್ಟರ್ ಅಥೆಂಟಿಕೇಶನ್ ನಿಮಗೆ ಅರ್ಥ ಆಗದೆ ಇದ್ದರೆ ಸಿಂಗಲ್ ಪ್ಯಾಕ್ಟರ್ ಅಥೆಂಟಿಕೇಶನ್ ಬಗ್ಗೆ ಅರ್ಥ ಮಾಡಿಕೊಳ್ಳೊಣ್ಣ. ಸಾಮಾನ್ಯವಾಗಿ ನಾವು ಯಾವುದೇ ಆನಲೈನ್ ಅಕೌಂಟ್ ನ್ನು , ಮೋಬೈಲ್ ನಲ್ಲಿ ಯಾವುದೇ ಆ್ಯಪ್ ನ್ನು, ಅಥವಾ ವೆಬ್ಸೈಟ್ ಗೆ ಲಾಗಿನ್ ಆಗಬೇಕಾದರೆ ಯೂಸರ್ ನೇಮ ಮತ್ತು ಪಾಸ್ವರ್ಡ ಅಥವಾ ಕೋಡನ್ನು ಬಳಸಿ ಲಾಗಿನ್ ಆಗುತ್ತೇವೆ. ಇಲ್ಲಿ ನಮ್ಮ ಅಕೌಂಟನ್ನು ತೆಗೆಯಲು ಒಂದು ಕೀಲಿ ಬಳಸಿದ್ದೀವಿ. ಇದು ಸಿಂಗಲ್ ಪ್ಯಾಕ್ಟರ್ ಅಥೆಂಟಿಕೇಶನ್ ಆಗುತ್ತದೆ. ಆದರೆ ಇದು ಹ್ಯಾಕರ್ ಗಳ ಕಾಲ ಹಾಗಾಗೀ ನಾವು ನಮ್ಮ ಮೋಬೈಲ್ ನಲ್ಲಿ ಅಕೌಂಟನ್ನು ತೆಗೆಯೋಕೆ 2 ಪ್ಯಾಕ್ಟರ್ ಕೀಗಳನ್ನು ಬಳಸಬೇಕು. ಇದನ್ನೇ 2 ಪ್ಯಾಕ್ಟರ ಅಥೆಂಟಿಕೇಶನ್ ಎನ್ನುವುದು.

          2 ಪ್ಯಾಕ್ಟರ್ ಅಥೆಂಟಿಕೇಶನದಿಂದ ಲಾಗಿನ್ ಆಗೋಕೆ ಕೇವಲ್ ಪಾಸವರ್ಡ ಬಳಸಿದರೆ ಲಾಗಿನ್ ಆಗುವುದಿಲ್ಲ. ಇನ್ನೊಂದು ಕೀಲಿಕೈಯಾಗಿ ಓಟಿಪಿ ಪಾಸವರ್ಡ, ಪಿಂಗರ್ ಪ್ರಿಂಟ್ ಬಳಸಬೇಕಾಗುತ್ತದೆ. ಅದಕ್ಕಾಗಿ 2 ಪ್ಯಾಕ್ಟರ್ ಅಥೆಂಟಿಕೇಶ ವೆರಿಪಿಕೇಶನ್ ಮಾಡುವುದು ತುಂಬಾ ಒಳ್ಳೆಯದು.

2 ಪ್ಯಾಕ್ಟರ್ ಅಥೆಂಟಿಕೇಶನ್ ಹೀಗೆ ಮಾಡಬೇಕೆಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ https://youtu.be/iI_vx7CD4Kk?si=5ahZDejmsL6OfL_F

One thought on “ಪ್ರೀತಿ-ಪ್ರೇಮದ ಹೆಸರಿನಲ್ಲೂ ಆನಲೈನ್ ವಂಚನೆ! ಅಂತರಾಜ್ಯ ಸೈಬರ್ ವಂಚಕರನ್ನು ಬಂಧಿಸಿದ ಪೋಲಿಸರು…

Leave a Reply

Your email address will not be published. Required fields are marked *