ಹಾರ್ದಿಕ್ ಪಾಂಡ್ಯ ಮತ್ತು ನತಾಸಾ ಸ್ಟಾಂಕೋವಿಕ್ ವಿಚ್ಛೇಧನ ವದಂತಿಗಳು ನಿಜವೇ?

ಹಾರ್ದಿಕ್ ಪಾಂಡ್ಯ ಮತ್ತು ನತಾಸಾ ಸ್ಟಾಂಕೋವಿಕ್ ವಿಚ್ಛೇಧನ ವದಂತಿಗಳು ನಿಜವೇ?

ಹಾರ್ದಿಕ್ ಪಾಂಡ್ಯರವರ ವೈಯಕ್ತಿಕ ಜೀವನ ಯಾಕೋ ಸರಿ ಇದ್ದಂಗೆ ಕಾನಸುತ್ತಿಲ್ಲ. ಪಾಂಡ್ಯ ಅವರ ವೈಯಕ್ತಿಕ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಹಾರ್ದಿಕ್ ಪಾಂಡ್ಯ ಮತ್ತು ನತಾಸಾ ಸ್ಟಾಂಕೋವಿಕ್ ವಿಚ್ಛೇಧನ ವದಂತಿಗಳು ನಿಜವೇ? ಎಂಬ ಮಾತುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ಸುದ್ದಿಯಾಗಿದೆ. ಅವರು ಈ ವರ್ಷದ ಐಪಿಲ್ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಮೇಲೆ ಅಂತೂ ಕ್ರೀಡಾ ಅಭಿಮಾನಿಗಳು ಹಾರ್ದಿಕ್ ಪಾಂಡ್ಯರವರನ್ನು ಅತ್ಯಂತ ಕೀಳು ಮಟ್ಟದಲ್ಲಿ ಟೀಕಿಸಲು ಪ್ರಾರಂಭಿಸಿದರು. ಅದರಲ್ಲೂ ಮುಂಬೈ ಇಂಡಿಯನ್ಸ್ ನ ಮಾಜಿ ನಾಯಕ ಮತ್ತು ಅಂತರಾಷ್ಟ್ರೀಯ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ ಶರ್ಮಾ ಅಭಿಮಾನಿಗಳು ಹಾರ್ದಿಕ್ ಪಾಂಡ್ಯರವರನ್ನು ಪ್ರತಿ ಪಂದ್ಯದಲ್ಲೂ ಅಮಾನಿಸಲು ಪ್ರಾರಂಭ ಮಾಡಿದ್ದರು.

ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಇದಕ್ಕೆಲ್ಲಾ ಕಾರಣ ಹಾರ್ದಿಕ್ ಪಾಂಡ್ಯರವರ ನಾಯಕತ್ವ ಕಾರಣ ಎಂದು ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳ ವಾದ. ಹಾರ್ದಿಕ್ ಪಾಂಡ್ಯ ಕೌಟುಂಬಿಕ ಸಮಸ್ಯೆಗಳು, ಫ್ರಾಂಚೈಸ್ ಒತ್ತಡ, ವಿಶ್ವಕಪ್ ಮತ್ತು ಈ ಎಲ್ಲಾ ಟ್ರೋಲ್‌ಗಳು ಅವನನ್ನು ಕುಗ್ಗುಂವತೆ ಮಾಡಿದ್ದರೂ ಸಹ ಅವನು ಪಂದ್ಯದ ಮಧ್ಯೆಯೇ ನಗುತ್ತಿದ್ದನು. ಅವನು ತನ್ನನ್ನು ಧನಾತ್ಮಕವಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು. ಇನ್ನೂ ಭಾರತ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಟ್ವೀಟ್ ಮಾಡಿ “ಹಾರ್ದಿಕ್ ಪಾಂಡ್ಯಾ ಡಿಪ್ರೇಶನಲ್ಲಿದ್ದಾರೆ” ಎಂದು ಹೇಳಿದ್ದರು.

Table of Contents

ಆದರೆ ಈಗ ಹಾರ್ದಿಕ ಪಾಂಡ್ಯ ಸುದ್ದಿಯಲ್ಲಿದ್ದಿದ್ದು ಕ್ರಿಕೆಟ್ ಸಲುವಾಗಿ ಅಲ್ಲ. ಹಾರ್ದಿಕ ಪಾಂಡ್ಯ ಮತ್ತು ಅವರ ಪತ್ನಿ ನತಾಸಾ ಸ್ಟಾಂಕೋವಿಕ್ ಅವರ ಸಂಭಂಧದಲ್ಲಿ ಬಿರುಕಾಗಿದ್ದು, ಇಬ್ಬರೂ ಶೀಘ್ರದಲ್ಲೇ ವಿಚ್ಛೇದನಕ್ಕೆ ಪಡೆದುಕೊಳ್ಳಬಹುದು ಎಂಬುದು ಈಗೀನ ಸುದ್ದಿ. ಪಾಂಡ್ಯರವರ ಪತ್ನಿ ನತಾಸಾ ಸ್ಟಾಂಕೋವಿಕ್ ರವರು ತಮ್ಮ ಜಾಲತಾಣದ ಖಾತೆಯಿಂದ ಹಾರ್ದಿಕ ಪಾಂಡ್ಯರವರ ಹೆಸರನ್ನು ತೆಗೆದಿದ್ದು ಹಾಗೂ ಐಪಿಲ್ ನಲ್ಲಿ ಪತಿಯನ್ನು ಬೆಂಬಲಿಸಲಕ್ಕೆ ಒಂದು ಬಾರಿಯೂ ಪಂದ್ಯ ವಿಕ್ಷೇಣೆಗೆ ಬರದೆ ಇರುವುದೇ ಇದಕ್ಕೆಲ್ಲಾ ಕಾರಣವಾಗಿದೆ.

ಹಾರ್ದಿಕ ಪಾಂಡ್ಯ ಮತ್ತು ಸತಾಸಾ ಸ್ಟಾಂಕೋವಿಕ್ ಅವರು ವಿಚ್ಛೇದನ ಪಡೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಇದರ ಬಗ್ಗೆ ಹಾರ್ದಿಕ ಪಾಂಡ್ಯ ಇಲ್ಲಿಯವರೆಗೂ ಯಾವುದೇ ಅಭಿಪ್ರಾಯ ವ್ಯಕ್ತಿಪಡಿಸಿಲ್ಲ. ಇದು ಕೇವಲ ಸಾಮಾಜಿಕ ಜಾಲದ ಸುದ್ದಿಯೋ ಅಥವಾ ನಿಜಾನೋ ಎಂಬುದು ಇನ್ನಷ್ಟೆ ತಿಳಿಯಬೇಕು.

ನತಾಸಾ ಸ್ಟಾಂಕೋವಿಕ್ ರವರ ಹಿನ್ನೆಲೆ:

ನತಾಸಾ ಸ್ಟಾಂಕೋವಿಕ್ ಮೂಲತಃ ಸರ್ಬಿಯಾ ದೇಶದ ಮಾಡೆಲ್. ನತಾಸಾ ಸ್ಟಾಂಕೀವಿಕ್ ಹಿಂದಿಯ ಪ್ರಸಿದ್ಧ ಡಾನ್ಸ್ ಶೋ ನಾಚ್ ಬಲಿಯೇ ಸಿಜನ್ 09 ರಲ್ಲಿ ಭಾಗವಹಿಸಿದ್ದಳು. ಅವಳು ಹಾರ್ದಿಕ್ ಪಾಂಡ್ಯರವರನ್ನು ಮದುವೆಯಾಗುವ ಮೊದಲು ಅಲಿ ಗೋನಿ ಎಂಬ ವ್ಯಕ್ತಿಯ ಜೊತೆ ಪ್ರೀತಿಯಲ್ಲಿದ್ದಳು. ಆದರೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇದ್ದಿದ್ದರಿಂದ ಅಲಿ ಗೋನಿಯಿಂದ ದೂರಾಗಿದ್ದಳು. ಇಬ್ಬರೂ ದೂರಾದ ನಂತರವೇ ಮತ್ತೆ ಇಬ್ಬರೂ ಸೇರಿ ನಾಚ್ ಬಲಿಯೇ ಸಿಜನ್ 09 ರಲ್ಲಿ ಭಾಗವಹಿಸಿದ್ದರು.

ತದನಂತರ ಅಲಿ ಗೋನಿ ಜೊತೆಗಿನ ಸಂಭಂಧ ಮುರಿದ ನಂತರ, ನತಾಶಾ ಹಾರ್ದಿಕ್ ಪಾಂಡ್ಯರನ್ನು ನೈಟ್‌ಕ್ಲಬ್‌ನಲ್ಲಿ ಭೇಟಿಯಾದರು. ಮೊದ ಮೊದಲು ಇಬ್ಬರು ಕೇವಲ ಪ್ರೀತಿಯಲ್ಲಿರಲಿಲ್ಲ. ಆದರೆ ದಿನ ಕಳೆದಂತೆ ಅವರ ಭೇಟಿಯು ಪ್ರೀತಿಗೆ ತಿರುಗಿತು. ನಂತರ, ಕೋವಿಡ್ -19 ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಧ್ಯೆ ನಟಾಸಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರನ್ನು ವಿವಾಹವಾದರು.

ಹಾರ್ದಿಕ್ ಪಾಂಡ್ಯ ಮತ್ತು ನತಾಸಾ ಸ್ಟಾಂಕೋವಿಕ್ ಅವರ ವಿವಾಹ

ಹಾರ್ದಿಕ್ ಪಾಂಡ್ಯ ಮೇ 31, 2020 ರಲ್ಲಿ ನಟ ನತಾಸಾ ಸ್ಟಾಂಕೋವಿಕ್ ಅವರನ್ನು ವಿವಾಹವಾದರು. ಇಬ್ಬರೂ ಅದೇ ವರ್ಷ ಜುಲೈ 30 ರಂದು ತಮ್ಮ ಮಗುವನ್ನು ಸ್ವಾಗತಿಸಿದರು. ಪಾಂಡ್ಯ ಮತ್ತು ನತಾಸಾ ಅವರು ತಮ್ಮ ವಿವಾಹದ ಸುಮಾರು ಮೂರು ವರ್ಷಗಳ ನಂತರ ಪ್ರೇಮಿಗಳ ದಿನದಂದು ಫೆಬ್ರವರಿ 2023 ರಲ್ಲಿ ಉದಯಪುರದಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಪ್ರತಿಜ್ಞೆಯನ್ನು ಸ್ವೀಕರಿಸಿದರು.

https://sports.ndtv.com/cricket/hardik-pandya-natasa-stankovic-why-is-the-celebrity-couple-in-news-5742450

ಹಾರ್ದಿಕ ಪಾಂಡ್ಯ ಮಲ ಸಹೋದರನಿಂದ ವ್ಯವಹಾರದಲ್ಲಿ ರೂ. 4 ಕೋಟಿ ವಂಚನೆ

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಮಲ ಸಹೋದರ ವೈಭವ್ ಪಾಂಡ್ಯ ಮತ್ತು ಆಲ್ ರೌಂಡರ್ ಕೃಣಾಲ್ ಅವರಿಗೆ ಸುಮಾರು 4.25 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆದರೆ ಅವರ ಕುಟುಂಬದ ಮೂಲಗಳ ಪ್ರಕಾರ ಇದು 40 ರಿಂದ 50 ಕೋಟಿಯವರೆಗೆ ವಂಚಿಸಲಾಗಿದೆ ಅಂದು ಅಂದಾಜಿಸಲಾಗಿದೆ. ಎಕನಾಮಿಕ್ ಅಫೆನ್ಸ್ ವಿಂಗ್ (EOW) ಪ್ರಕಾರ, ಪಾಂಡ್ಯ ಸಹೋದರರು ವೈಭವ್ ಜೊತೆಗೆ 2021 ರಲ್ಲಿ ಪಾಲಿಮರ್ ವ್ಯಾಪಾರ ಸಂಸ್ಥೆಯನ್ನು ಸ್ಥಾಪಿಸಿದ್ದರು, ಅಲ್ಲಿ ವೈಭವ್ ದೈನಂದಿನ ಕಾರ್ಯಾಚರಣೆಗಳನ್ನು ನೋಡಿಕೊಳ್ಳಲು ನಿಯೋಜಿಸಲಾಗಿತ್ತು. ಆದರೆ ವೈಭವ್ ಪಾಂಡ್ಯಾ ಸಹೋದರರ ನಡುವಿನ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಮತ್ತು ಇಬ್ಬರು ಸಹೋದರರನ್ನು ಕತ್ತಲೆಯಲ್ಲಿಟ್ಟು ಅದೇ ವ್ಯವಹಾರದಲ್ಲಿ ತನ್ನದೇ ಆದ ಮಾಲೀಕತ್ವದ ಸಂಸ್ಥೆಯನ್ನು ಸ್ಥಾಪಿಸಿದರು. ಇದ್ಯಾವುದೂ ಪಾಂಡ್ಯಾ ಸಹೋದರರ  ಗಮನಕ್ಕೆ ಬರದೇ ಇರುವುದು ವಿಪರ್ಯಾಸ.

          ನಂತರ, ವೈಭವ್ ಎಲ್.ಎಲ್.ಪಿ ಸಂಸ್ಥೆಯಿಂದ ಹಣವನ್ನು ತನ್ನ ಸ್ವಂತ ಸಂಸ್ಥೆಗೆ ವರ್ಗಾವಣೆ ಮಾಡಿಕೊಂಡಿದ್ದರು. ಮುಂದೆ ಪಾಲುದಾರಿಕೆ ಸಂಸ್ಥೆಯಲ್ಲಿ ಲಾಭ ಕುಸಿಯಲು ಪ್ರಾರಂಭಿಸಿತು. ಇಷ್ಟೇ ಅಲ್ಲದೇ ವೈಭವ್ ತನ್ನ ಬಾಕಿ ಪಾಲನ್ನು ಮೀರಿ ಎಲ್‌ಎಲ್‌ಪಿ ಸಂಸ್ಥೆಯಲ್ಲಿ ತನ್ನ ಲಾಭದ ಶೇಕಡಾವಾರು ಪ್ರಮಾಣವನ್ನು ಇಬ್ಬರು ಸಹೋದರರಿಗೆ ಗೊತ್ತಾಗದಂತೆ ವಂಚನೆ ಎಸಗಿದ್ದಾನೆ. ಇದಕ್ಕಾಗಿ ಅವರು ಎಲ್‌ಎಲ್‌ಪಿ ಒಪ್ಪಂದದಲ್ಲಿ ಪಾಂಡ್ಯ ಸಹೋದರರ ನಕಲಿ ಸಹಿಯನ್ನು ಮಾಡಿದ್ದಾರೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಹಾರ್ದಿಕ್ ಪಾಂಡ್ಯ 70% ಆಸ್ತಿಯನ್ನು ಕಳೆದುಕೊಳ್ಳುತ್ತಾರಾ?

ನತಾಸಾ ಸ್ಟಾಂಕೋವಿಕ್‌ಗಾಗಿ ಹಾರ್ದಿಕ್ ಪಾಂಡ್ಯ 70% ಆಸ್ತಿಯನ್ನು ಕಳೆದುಕೊಳ್ಳುತ್ತಾರಾ? ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ವಂದತಿಯು ಹರಿದಾಡುತ್ತಿದೆ. ಹಾರ್ದಿಕ ಪಾಂಡ್ಯಾ ಹೆಂಡತಿ ನತಾಸಾ ಸ್ಟಾಂಕೀವಿಕ್ ವಿಚ್ಛೇಧನ ಸಲುವಾಗಿ ಅವಳಿಗೆ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ 70% ರಷ್ಟು ಆಸ್ತಿಯನ್ನು ನತಾಸಾ ಹೆಸರಗೆ ಮಾಡಬೇಕೆಂಬುದು ಸದ್ಯಕ್ಕಿರುವ ಜಾಲತಾಣದ ವದಂತಿ. ಆದರೆ ಇದರ ಬಗ್ಗೆ ಇಬ್ಬರೂ ಕಡೆಯಿಂದಲೂ ಯಾವುದೇ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಹಾರ್ದಿಕ ಪಾಂಡ್ಯರವರ ವಿಚ್ಛೇಧನ ವಿಷಯ ಟ್ರೆಂಡಿಂಗ್ ಆಗಿದೆ. ಇದರ ನಡುವೆ ಇನ್ನೊಂದು ವಿಷಯ ಹರಿದಾಡುತ್ತಿದೆ.  ಕೆಲವು ಮೂಲಗಳ ಪ್ರಕಾರ ಹಾರ್ದಿಕ್ ಪಾಂಡ್ಯ ತನ್ನ ಕೆಲವು ಆಸ್ತಿಗಳನ್ನು ತನ್ನ ತಾಯಿಯ ಹೆಸರಿನಲ್ಲಿ ನೊಂದಾಣಿ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.  ಒಂದು ವೇಳೆ ಇದು ನಿಜವಾಗಿದ್ದರೆ ನತಾಸಾ ಸ್ಟಾಂಕೋವಿಕ್ ಗೆ ಹಾರ್ದಿಕ್ ಪಾಂಡ್ಯಾ ಶೇ 70% ರಷ್ಟು ಕಳೆದುಕೊಳ್ಳುತ್ತಾರೆ ಎನ್ನುವುದು ಸಾಮಾಜಿಕ ಜಾಲತಾಣದ ಬಳಕೆದಾರರ ಮಾತು.

ಹಾರ್ದಿಕ್ ಪಾಂಡ್ಯಾ ದಿವಾಳಿಯಾದ್ರಾ?

ಹೌದು, ಹಾರ್ದಿಕ ಪಾಂಡ್ಯಾ ದಿವಾಳಿಯಾದ್ರಾ ಎಂಬುದು ಈಗ ಎಲ್ಲರಲ್ಲಿಯೂ ಇರುವ ಯಕ್ಷ ಪ್ರಶ್ನೆ. ಐಪಿಲ್ ನಲ್ಲಿ ಗುಜರಾತ ತಂಡದ ನಾಯಕತ್ವವನ್ನು ತ್ಯಜಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಂದಿದ್ದೆ ಅವರು ತಮ್ಮ ಮಲ ಸಹೋದರ ವೈಭವ ಪಾಂಡ್ಯಾ ಮಾಡಿದ ವಂಚನೆಯಿಂದಾಗಿ ಎಂದು ಒನ್ ಕ್ರಿಕೆಟ್ ವೆಬ್ಸೈಟ್ ಅಭಿಪ್ರಾಯಪಟ್ಟಿದೆ. ಈ ಘಟನೆ ಪಾಂಡ್ಯಾರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳುವಂತೆ ಪ್ರಭಾವ ಬೀರಿತು ಎಂದು ಹೇಳಲಾಗುತ್ತಿದೆ. ಮೊದಲೇ ಹೇಳಿದ ಪ್ರಕಾರ ವಂಚನೆಯಲ್ಲಿ ಕಳೆದುಕೊಂಡಿದ್ದು ಕೇವಲ 3-4 ಕೋಟಿ ಅಲ್ಲ. ಅದು ಬರೋಬರಿ 40 ರಿಂದ 50 ಕೋಟಿ ತನಕ ವಂಚನೆಯಾಗಿದೆ ಎಂದು ಒನ್ ಕ್ರಿಕೆಟ್ ಹೇಳಿಕೊಂಡಿದೆ. ಇದೆ ಕಾರಣಕ್ಕೆ ಪಾಂಡ್ಯಾ ರಾತ್ರೋರಾತ್ರಿ ಬಡವರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Patek Philippe

Patek Philippe

          ಇಲ್ಲಿ ಪಾಂಡ್ಯಾರವರ ಜೀವನ ಶೈಲಿಯನ್ನು ಸಹ ಗಮನಿಸಬೇಕು. ಏಕೆಂದರೆ ಪಾಂಡ್ಯಾ ಅಂತ್ಯತ ದುಬಾರಿ ಜೀವನ ಶೈಲಿ ಹೊಂದಿದ್ದರು. ದುಬಾರಿ ಬೆಲೆಯ ಕಾರು, ಕೈ ಗಡಿಯಾರ, ವೈಭವದಲ್ಲಿರುವ ಹಲವಾರು ಮನೆಗಳು ಖರೀದಿಸಿದ್ದರು. ಅವರು ಹಾಕಿಕೊಳ್ಳುತ್ತಿದ್ದ ವಾಚ್ ಪಟೆಕ. ಇದರ ಬೆಲೆ 4 ರಿಂದ 6 ಕೋಟಿ ಎಂದು ಹೇಲಾಗುಗುತ್ತಿದೆ. ಹಾರ್ದಿಕ್ ಪಾಂಡ್ಯಾರವರ ಜೀವನ ಶೈಲಿ ಆಕಾಶ ಮುಟ್ಟಿದ ಸಮಯದಲ್ಲಿಯೇ ಅವರ ಮಲ ಸಹೋದರ ವೈಭವ ವಂಚನೆ ಮಾಡಿ ಹಾರ್ದಿಕ್ ರ ವೈಭವವನ್ನು ಕಸೆದುಕೊಂಡಿದ್ದಾನೆಂದು ಹೇಳಬಹುದು. ದುಬಾರಿ ಜೀವನ ಶೈಲಿ ನಡೆಸಲು ಅವರ ಬಳಿ ಇದ್ದ ಎಲ್ಲ ಹಣವೂ ಕಿತ್ತುಕೊಂಡು ಹೋದಂತಾಗಿದೆ.

ಹಾರ್ದಿಕ್ ಗೆ ಆಸರೆಯಾಯ್ತ ಅಂಬಾನಿ ಕುಟುಂಬ?

ಆರ್ಥಿಕ ದಿವಾಳಿಯಾದ ಹಾರ್ದಿಕ್ ಪಾಂಡ್ಯಾರ ಸಹಾಯಕ್ಕಾಗಿ ತನ್ನ ಮೊದಲ ಕ್ರಿಕೇಟ್ ಪ್ರ್ಯಾಂಚೇಸಿ ಮುಂಬೈ ಇಂಡಿಯ್ಸ್ ತಂಡದ ಮಾಲೀಕರಾದ ಅಂಬಾನಿ ಕುಟುಂಬದ ಮೊರೆ ಹೋಗಿದ್ದಾರೆ. ಭಾರತದಲ್ಲಿ ಅತ್ಯಂತ ಶ್ರೀಮಂತ ಕುಟುಂಬ ಎನಿಸಿಕೊಂಡಿರುವ ಅಂಬಾನಿ ಕುಟುಂಬ ಆರ್ಥಿಕವಾಗಿ ದಿವಾಳಿಯಾದ ಹಾಗೂ ಛಿದ್ರವಾದ ಜೀವನವನ್ನು ಸುಧಾರಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ವಾಪಸಾತಿ, ನಾಯಕತ್ಸ, ಹಾಗೂ ತಂಡಕ್ಕೆ ನಿಷ್ಠೆಯಿಂದು ಇರಬೇಕು ಎನ್ನುವುದು ಅಂಬಾನಿ ಕುಟುಂಬದ ಮಾತು. ಅದಕ್ಕಾಗಿ ಹಾರ್ದಿಕ್ ಪಾಂಡ್ಯಾರಿಗೆ ನಾಯಕತ್ವ ವಹಿಸಿಕೊಡಲಾಗಿದೆ ಎಂದು ತಂಡದ ಮಾತುಗಳು. ಆದರೆ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ರೋಹಿತ ಶರ್ಮಾ ಅಭಿಮಾನಿಗಳಿಗೆ ಇದು ಹೃದಯ ಛಿದ್ರಗೊಳಿಸಿತ್ತು.  ಕ್ರಿಕೆಟ್ ವೆಬ್ಸೈಟ್ ಗಳು ಹಾಗೂ ಕೆಲವು ರಾಷ್ಟ್ರೀಯ ಮಾಧ್ಯಮಗಳ ಮಾಹಿತಿ ಪ್ರಕಾರ ಹಾರ್ದಿಕ್ ಪಾಂಡ್ಯಾ ಅಂಬಾನಿ ಪ್ಯಾಮಿಲಿಯೊಂದಿಗೆ ನೇರವಾಗಿ ಸಂಪರ್ಕಿಸಿ ತನಗೆ ಸಹಾಯ ಕೊಡುವಂತೆ ಕೇಳಿಕೊಂಡಿದ್ದಾರೆ. ಅದರ ಬದಲಾಗಿ ಅವರನ್ನು ತಂಡಕ್ಕೆ ಮರಳಿ ಕರೆಸಿಕೊಂಡು ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಈ ರೀತಿ ಪರೋಕ್ಷವಾಗಿ ವ್ಯವಸ್ಥೆ ಮಾಡಲಾಗಿದೆ ಎಂಬ ವರದಿಗಳು ಬರುತ್ತಿವೆ.

ಟಿ-20 ವಿಶ್ವಕಪ್ ಗೆ ಆಯ್ಕೆ

ಹಾರ್ದಿಕ್ ಪಾಂಡ್ಯಾ ಮುಂದಿನ ತಿಂಗಳು ಜೂ 02 ರಿಂದ ನಡೆಯುವ ಟಿ-20 ವಿಶ್ವಕಪ್ ಗೆ ಆಯ್ಕೆಯಾಗಿದ್ದಾರೆ. ಇದು ಎಲ್ಲ ಕ್ರಿಕೇಟ್ ಅಭಿಮಾನಿಗಳಿಗೆ ಆಶ್ಚರ್ಯವಾಗಿತ್ತು. ಕಾರಣ ಈ ವರ್ಷದ ಐಪಿಎಲ್ ನಲ್ಲಿ ಅವರು ನಾಯಕತ್ವ ವಹಿಸಿಕೊಂಡ ತಂಡ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಗಳಿಸಿತ್ತು. ಹಾಗೂ ಹಾರ್ದಿಕ್ ಪಾಂಡ್ಯಾರ ವಯಕ್ತಿಕವಾಗಿ ತಂಡಕ್ಕೆ ಕೊಡುಗೆ ಶೂನ್ಯ. ಅವರು ಆಡಿದ 10 ಪಂದ್ಯಗಳಲ್ಲಿ ಅವರ ರನ್ ಗಳಿಸಿದ್ದು 197 ಮಾತ್ರ. ಗುಜರಾತ ತಂಡದ ನಾಯಕನಾಗಿದ್ದಾಗ ಇರುವ ಹಾರ್ದಿಕ್ ಪಾಂಡ್ಯಾ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದಾಗ ಕಾಣಲಿಲ್ಲ. ಇಷ್ಟಾದರೂ ಸಹ ಅವರು ಟಿ-20 ಭಾರತ ತಂಡಕ್ಕೆ ಆಯ್ಕೆಯಾಗಿದ್ದು ಆಶ್ಚರ್ಯವೇ ಎನ್ನಬಹುದು.  ಭಾರತ ತಂಡದ ನಾಯಕ ರೋಹಿತ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯಾ ನಡುವೆ ವೈಮನಸ್ಸು ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಐಪಿಎಲ್ ನಲ್ಲಿ ತಂಡ ಸಂಕಷ್ಟದಿಲ್ಲಿದ್ದಾಗಲೂ ಸಹ ಹಾರ್ದಿಕ್ ಪಾಂಡ್ಯಾ ನಡುವಳಿಕೆ ಎಲ್ಲರೂ ಕೋಪ ನೆತ್ತಿಗೆರಿಸುವಂತಿತ್ತು. ಕೆಲವು ಗೆಲ್ಲುವ ಪಂದ್ಯಗಳನ್ನು ಹಾರ್ದಿಕ್ ಪಾಂಡ್ಯಾ ತಮ್ಮ ಕಡಿಮೆ ಸ್ಟ್ರೈಕರೇಟ್ ದಿಂದಾಗಿ ಮುಂಬೈ ಇಂಡಿಯನ್ಸ್ ತಂಡ ಸೋಲು ಕಂಡಿತು.

ಟಿ-ವಿಶ್ವಕಪ್ ನಲ್ಲಾದರೂ ಅವರು ತಮ್ಮ ವಯಕ್ತಿಕ ಪ್ರತಿಷ್ಠೆ,ತಮ್ಮ ನಡುವಳಿಕೆಯನ್ನು ಸುಧಾರಿಸಿಕೊಂಡು ಭಾರತ ತಂಡಕ್ಕೆ ಒಳ್ಳೆಯ ಕೊಡುಗೆ ನೀಡಲಿ. ಅವರು ಕ್ರಿಕೇಟ್ ಆಟ ಆಡಬೇಕಾಗಿರುವುದು ಭಾರತ ತಂಡಕ್ಕಾಗಿಯೇ ಹೊರತು ಮುಂಬೈ ಇಂಡಿಯನ್ಸ್ ತಂಡಕ್ಕೆ ಅಲ್ಲ ಎಂಬುದು ಅವರ ಮನದಲ್ಲಿರಬೇಕು ಎಂಬುದು ಕ್ರಿಕೇಟ್ ಅಭಿಮಾನಿಗಳ ಮಾತು. ನಾಯಕ ರೋಹಿತ್ ಶರ್ಮಾ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಸೇರಿದಂತೆ ಭಾರತೀಯ ಕ್ರಿಕೆಟಿಗರ ಮೊದಲ ಗುಂಪು USA ಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಅವರ ಜೊತೆಗೆ ಇತರ ತಂಡದ ಸದಸ್ಯರು ಇದ್ದರು. ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್, ಸಹಾಯಕ ಸಿಬ್ಬಂದಿ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್. ಟೀಂ ಇಂಡಿಯಾ ಆಟಗಾರರು ಟಿ20 ವಿಶ್ವಕಪ್‌ಗೆ ತೆರಳುತ್ತಿದ್ದಂತೆ ನತಾಸಾ ಸ್ಟಾಂಕೋವಿಕ್ ವಿಚ್ಛೇದನದ ವದಂತಿಗಳ ನಡುವೆ ಹಾರ್ದಿಕ್ ಪಾಂಡ್ಯ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದಾರೆ.

https://cricket.one/cricket-news/hardik-pandya-and-natasa-stankovic-divorced-70-of-property-to-be-transferred-reports/66518c70fdc09c66a5327026

https://www.hindustantimes.com/cricket/hardik-pandya-suspiciously-missing-amid-natasa-stankovic-divorce-rumours-as-team-india-players-leave-for-t20-world-cup-101716653105976.html

Leave a Reply

Your email address will not be published. Required fields are marked *