ಹಾಸನದ ಅಶ್ಲೀಲ ಪೆನ್ಡ್ರೈವ್ ಪ್ರಕರಣದಲ್ಲಿ ಕಳೆದೊಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಸಂಸದ ಪ್ರಜ್ವಲ್ ರೇವಣ್ಣನವರು ಮೇ ತಿಂಗಳ ಕೊನೆಯ ದಿನವಾದ ಮೇ 31 ರಂದು ವಿಚಾರಣೆಗೆ ಹಾಜರಾಗುವೆ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಅಜ್ಞಾತ ಸ್ಥಳದಿಂದ ವಿಡಿಯೋ ಬಿಟ್ಟಿರುವ ಅವರು, ಮೇ 31 ರಂದು ಬೆಳಿಗ್ಗೆ 10 ಘಂಟೆಗೆ ಎಸ್.ಐ.ಟಿ ಮುಂದೆ 31 ರಂದು ವಿಚಾರಣೆಗೆ ಹಾಜರು: ಸಂಸದ ಪ್ರಜ್ವಲ್ ಹಾಜರಾವುದಾಗಿ ತಿಳಿಸಿದ್ದಾರೆ. ದೇಶಾದ್ಯಂತ ಭಾರಿ ಸುದ್ದಿಯಾಗಿರುವ ಪೆನ್ ಡ್ರೈವ್ ಕೇಸನ ಆರೋಪಿ ಪ್ರಜ್ವಲ್ ರೇವಣ್ಣ ಇಡೀ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಪೋಲಿಸರ್ ಮುಂದೆ ಹಾಜರಾಗುವಂತೆ ಮೊಮ್ಮನಿಗೆ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ವಿದೇಶದಿಂದ ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ, ರಾಜ್ಯದ ಜನತೆ, ತಂದೆ-ತಾಯಿ, ತಾತ ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಬಳಿ ಕ್ಷಮೆಯಾಚಿಸಿದ್ದಾರೆ.
ಎಲ್ಲರಿಗೂ ನಮಸ್ಕಾರ, ಮೊದಲನೇಯದಾಗಿ ನನ್ನ ತಂದೆ-ತಾಯಿಗೆ, ತಾತನಿಗೆ ಹಾಗೂ ನನ್ನ ಕುಮಾರಣ್ಣನಿಗೆ ಹಾಗೂ ನಾಡಿನ ಜನತೆಗೆ, ಎಲ್ಲ ಕಾರ್ಯಕರ್ತರಿಗೆ ಕ್ಷಮಾಪಣೆ ಕೇಳುತ್ತಾ, ನಾನು ಫಾರಿನ್ ನಲ್ಲಿ ಎಲ್ಲಿದ್ದೀನಿ ಅಂತ ಸರಿಯಾಗಿ ಮಾಹಿತಿ ಕೊಡದೇ ಇರುವುದಕ್ಕೆ ಇವತ್ತು ಮಾಹಿತಿ ಕೊಡಲು ಬಂದಿದ್ದೇನೆ. ಎಪ್ರಿಲ್ 26 ನೇ ತಾರೀಖು ಚುನಾವಣೆ ನಡೆದಾಗ ನನ್ನ ಮೇಲೆ ಯಾವುದೇ ಕೇಸ್ ಆಗಲಿ ಇರಲಿಲ್ಲ. ಎಸ್.ಐ.ಟಿ ಯೂ ರಚನೆ ಆಗಿರಲಿಲ್ಲ. ಎಪ್ರಿಲ್ 26 ರಂದು ಫಾರಿನ್ ಗೆ ಹೋಗುವುದು ಮೊದಲೇ ನಿಗದಿಯಾಗಿತ್ತು. ನಾನು ವಿದೇಶಕ್ಕೆ ಹೋದ ಮೇಲೆ 3-4 ದಿನಗಳ ನಂತರ, ಯೂಟ್ಯೂಬ್ ವೀಕ್ಷೀಸುತ್ತಾ, ನ್ಯೂಸ್ ಚಾನೆಲ್ ನೋಡುವಾಗ ಈ ಮಾಹಿತಿ ದೊರೆಯಿತು ಎಂದು ಹೇಳಿದರು.
ಎಸ್.ಐ.ಟಿ ನೋಟಿಸ್ ಗೆ ಉತ್ತರಿಸಲು ನಾನು ಟ್ವೀಟ್ ಮತ್ತು ವಕೀಲರ ಮೂಲಕ 7 ದಿನ ಸಮಯಾವಕಾಶ ಕೇಳಿದ್ದೆ. ಅದರ ಮರು ದಿನವೇ ಕಾಂಗ್ರೆಸ್ ನಾಯಕ ರಾಹುಲ ಗಾಂಧೀ ಎಲ್ಲಾ ಹಿರಿಯ ನಾಯಕರು ಓಪನ್ ವೇದಿಕೆಗಳಲ್ಲಿ ಈ ವಿಚಾರ ಚರ್ಚಿಸಲು ಪ್ರಾರಂಭಿಸಿದರು. ರಾಜಕೀಯ ಪಿತೂರಿಯ ಕೆಲಸ ಮಾಡಿದರು. ಇದರಿಂದ ನಾನು ಖಿನ್ನತೆಗೆ ಹೋದೆ, ಐಸೋಲೇಶನ್ ನಲ್ಲಿದ್ದೆ. ನಂತರ ಹಾಸನದಲ್ಲೂ ಕೆಲವು ಶಕ್ತಿಗಳು ಒಟ್ಟಿಗೆ ಸೇರಿ ರಾಜಕೀಯವಾಗಿ ನಾನು ಬೆಳೆಯುತ್ತಿರುವದಕ್ಕೆ ನನ್ನನ್ನು ಕುಗ್ಗಿಸಲು ಯತ್ನಿಸುತ್ತಿವೆ. ಇದೆಲ್ಲ ನೋಡಿ ನನಗೆ ಆಘಾತವಾಯಿತು. ಹೀಗಾಗಿ ನಾನೇ ಚೂರು ದೂರ ಉಳಿದೆ. ಇದರ ಬಗ್ಗೆ ಯಾರೂ ತಪ್ಪು ತಿಳಿಯುವುದು ಬೇಡ. ನಾನೇ ಖುದ್ದಾಗಿ ಶುಕ್ರವಾರ ಮೇ 31 ರಂದು ಬೆಳಿಗ್ಗೆ 10:00 ಘಂಟೆಗೆ ಎಸ್.ಐ.ಟಿ ಮುಂದೆ ಬಂದು, ವಿಚಾರಣೆಗೆ ಸಹಕಾರ ನೀಡುತ್ತೇನೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ಇಂಥ ಸುಳ್ಳು ಕೇಸಿನಿಂದ ಹೊರಬರುತ್ತೇನೆ ಎಂಬ ನಂಬಿಕೆಯಿದೆ. ದೇವರು, ಕುಟುಂಬ, ಜನರ ಆಶೀರ್ವಾದ ನನ್ನ ಮೇಲೆ ಇರಲಿ 31 ರಂದು ಎಸ್.ಐ.ಟಿ ಮುಂದೆ ಬಂದು ಎಲ್ಲದಕ್ಕೂ ತೆರೆ ಎಳೆಯುತ್ತೇನೆ ಎಂದು ಪ್ರಜ್ವಲ್ ರೇವಣ್ಣರವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಎಸ್.ಐ.ಟಿ ಸಹ ಒಂದು ತಿಂಗಳಿನಿಂದ ಪ್ರಜ್ವಲ್ ರೇವಣ್ಣರವರ ಸುಳುವಿಗಾಗಿ ಹುಡುಕಾಟ ನಡೆಸಿದರು ಯಾವುದೇ ಉಪಯೋಗವಾಗಲಿಲ್ಲ. ಇನ್ನೇನು ಬಂಧನಕ್ಕೆ ಅರೆಸ್ಟ್ ವಾರೆಂಟ್ ಪಡೆದು ಪಾಸ್ಪೋರ್ಟ್ ರದ್ದು ಮಾಡುವ ಕೊನೆಯ ಹಂತಕ್ಕೆ ತಲುಪಿತ್ತು. ಕೆಲವೇ ದಿನಗಳಲ್ಲಿ ಪಾಸಪೋರ್ಟ್ ರದ್ದು ಮಾಡಿ ಪ್ರಜ್ವಲ್ ರೇವಣ್ಣರವರನ್ನು ಪತ್ತೆ ಹಚ್ಚಬೇಕು ಎನ್ನುವಷ್ಟರಲ್ಲಿಯೇ ‘ಮೇ 31ಕ್ಕೆ ಎಸ್.ಐ.ಟಿ ಮುಂದೆ ಹಾಜರಾಗುತ್ತೇನೆ ಎಂದು ಹೇಳುವ ಮೂಲಕ ಇಷ್ಟು ದಿನ ಪ್ರಜ್ವಲ್ ರೇವಣ್ಣ ಯಾವಾಗ ಬರ್ತಾರೆ ಎನ್ನುವ ಅನುಮಾನಕ್ಕೆ ಪ್ರಜ್ವಲ್ ರೇವಣ್ಣ ಅವರೇ ತೆರೆ ಎಳೆದಿದ್ದಾರೆ.
ಏರಪೋರ್ಟನಲ್ಲಿಯೇ ಪ್ರಜ್ವಲ್ ರೇವಣ್ಣ ಬಂಧನ?
ಸಂಸದ ಪ್ರಜ್ವಲ್ ರೇವಣ್ಣರವರು ಮೇ 31 ರಂದು ಭಾತರಕ್ಕೆ ಬರುವ ವಿಷಯವನ್ನು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡ ಬೆನ್ನಲೇ ಎಸ್.ಐ.ಟಿ ಅಧಿಕಾರಿಗಳು ಏರಪೋರ್ಟ್ ನಲ್ಲಿಯೇ ಪ್ರಜ್ವಲ್ ರವರನ್ನು ಬಂಧಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಸ್.ಐ.ಟಿ ಯ ಗುಪ್ತಚರ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ನಿಗಾ ವಹಿಸಿದ್ದಾರೆ. ಪ್ರಜ್ವಲ್ ಆಗಮಿಸುತ್ತಿದ್ದಂತೆಯೇ ಬಂಧನದ ಬಳಿಕ ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಕಾನೂನು ತಜ್ಞರ ಜೊತೆಗೆ ಎಸ್.ಐ.ಟಿ ಅಧಿಕಾರಿಗಳು ಮಾತುಕತೆ ನಡಿಸಿದ್ದಾರೆ. ಪ್ರಜ್ವಲ್ ಯಾವ ವಿಮಾನದಲ್ಲಿ ಬರುತ್ತಾರೆ ಎಂಬುದನ್ನೂ ಗಮನಿಸಲಾಗುತ್ತಿದೆ. ಈಗಾಲೇ ಜರ್ಮನಿಯಿಂದ ಈ ಹಿಂದೆ ಟಿಕೆಟ್ ಬುಕ್ ಮಾಡಿ ಕೊನೇ ಕ್ಷಣದಲ್ಲಿ ರದ್ದುಪಡಿಸಿದ್ದರು. ಹೀಗಾಗಿ ಎಸ್.ಐ.ಟಿ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಪ್ರಜ್ವಲ್ ರೇವಣ್ಣ ರವರ ಸಂಪರ್ಕಕ್ಕೂ ಪ್ರಯತ್ನಿಸುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ಅರೆಸ್ಟ್ ಅಂತೂ ಆಗುತ್ತಾರೆ: ಡಾ.ಜಿ.ಪರಮೇಶ್ವರ್
ತುಮಕೂರು : ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಮೇ 31 ರಂದು ಎಸ್.ಐ.ಟಿ ಮುಂದೆ ಹಾಜರಾಗುವುದಾಗಿ ವಿಡಿಯೋ ಮೂಲಕ ತಿಳಿಸಿದ್ದು, ಅವರೇ ಶರಣಾಗುವುದಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ಅರೆಸ್ಟ್ ಅಂತೂ ಆಗುತ್ತಾರೆ. ಅವರನ್ನು ಎಸ್.ಐ.ಟಿ ಯವರು ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ, ಎಸ್.ಐ.ಟಿ ಬಳಿ ಇರುವ ದಾಖಲೆಗಳ ಆಧಾರದ ಮೇಲೆ ತನಿಖೆ ನಡೆಯಲಿದೆ. ಬಂಧನದ ವಾರೆಂಟ್ ಜಾರಿಯಾಗಿರುವುದರಿಂದ ತನಿಖೆಯ ಭಾಗವಾಗಿ ಬಂಧನ ಮಾಡಬೇಕಾಗುತ್ತದೆ ಎಂದರು. ರಾಜ್ಯದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
ತಡವಾದರೂ ಕೊನೆಗೆ ಪ್ರಜ್ವಲ್ ತಪ್ಪು ಒಪ್ಪಿಕೊಂಡಿದ್ದಾರೆ. ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಎಲ್ಲರೂ ಕಾನೂನು ಮೂಮದೆ ತಲೆಬಾಗಲೇ ಬೇಕು. ಪ್ರಜ್ವಲ್ ತಪ್ಪಿಸಿಕೊಂಡಿದ್ದು ಸರಿಯಲ್ಲ. ಇದು ಕಾಂಗ್ರೆಸ್ ಸರ್ಕಾರದ ಷಡ್ಯಂತ್ರವೆಂದು ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ತಮ್ಮವರನ್ನು ಬಚಾವ್ ಮಾಡುವುದಕ್ಕೋಸ್ಕರ್ ಕಾಂಗ್ರೆಸ್ ಸರ್ಕಾರ ಎಸ್.ಐ.ಟಿ ರಚಿಸಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕರವರು ಹೇಳಿದ್ದಾರೆ.
ಪ್ರಜ್ವಲ್ ಆಗಮನ ನಿರ್ಧಾರ ಸಮಾಧಾನ ಮೂಡಿಸಿದೆ: ಎಚ್.ಡಿ.ಕೆ
ಚಿಕ್ಕಬಳ್ಳಾಪುರ : ಎಸ್.ಐ.ಟಿ ಮುಂದೆ ಶುಕ್ರವಾರ ಹಾಜರಾಗುವುದಾಗಿ ಪ್ರಜ್ವಲ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವುದು ನಮಗೆ ಸ್ವಲ್ಪ ಸಮಾಧಾನ ತಂದಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತಿನಾಡಿದ ಅವರು, ಎಲ್ಲೇ ಇದ್ದರೂ ತಕ್ಷಣ ಬಂದು ಎಸ್.ಐ.ಟಿ ಮುಂದೆ ಹಾಜರಾಗಿ ತನಿಖೆಗೆ ಸಹಕಾರ ಕೊಡುವಂತೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಎಚ್ಚರಿಕೆ ಕೊಟ್ಟಿದ್ದರು. ನಾನೂ ಈ ಬಗ್ಗೆ ಮನವಿ ಮಾಡಿದ್ದೆ. ಪಕ್ಷದ ಕಾರ್ಯಕರ್ತರಿಗೆ ಗೌರವ ಇದ್ದರೆ ತಕ್ಷಣ ಬರುವಂತೆ ಹೇಳಿದ್ದೇವು. ನಮ್ಮ ಮಾತಿಗೆ ಬೆಲೆಕೊಟ್ಟು ಪ್ರಜ್ವಲ್ ಮರಳಿ ಭಾರತಕ್ಕೆ ಬರುತ್ತಿರುವುದಕ್ಕೆ ನಮಗೆ ಸ್ವಲ್ಪ ಸಮಾಧಾನವಾಗಿದೆ. ಕ್ಷಮೆ ಕೋರುವ ಮೂಲಕ ಕಾರ್ಯಕರ್ತರ ಬಗ್ಗೆ ಮಮತೆ ಇರುವುದನ್ನು ತೋರಿಸಿಕೊಂಡಿದ್ದಾನೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಪ್ರಕ್ರಿಯೆಗಳು ಆಗಬೇಕೋ ಅದು ಆಗುತ್ತದೆ ಎಂದರು.
ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋದ ಭವಾನಿ ರೇವಣ್ಣ….
ಮೈಸೂರಿನ ಕೆ.ಆರ್.ನಗರದ ಮಹಿಳೆಯ ಅಪಹರಣದಲ್ಲಿ ಎಸ್.ಐ.ಟಿ ಕೊಟ್ಟಿರುವ ನೋಟಿಸ್ ಗೆ ದೇವೇಗೌಡರ ಹಿರಿಯ ಸೊಸೆ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣರವರ ಪತ್ನಿ ಭವಾನಿ ರೇವಣ್ಣ ಸ್ಪಂದಿಸದ ಕಾರಣ್ಣ ಭವಾಣಿ ರೇವಣ್ಣರಿಗೂ ಬಂಧನವಾಗುವ ಭಯ ಶುರುವಾಗಿದೆ. ಇದೀಗ ಮುಂಜಾಗ್ರತಾ ಕ್ರಮವಾಗಿ ಜಾಮೀನು ಕೋರಿ ಭವಾನಿ ಜನಪ್ರತಿನಿಧಿಗಳ ನ್ಯಾಯಾಯಲಯದ ಮೊರೆ ಹೋಗಿದ್ದಾರೆ. ಕೆ.ಆರ್. ನಗರದ ಅಪಹರಣದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಶಾಸಕ ಎಚ್.ಡಿ.ರೇವಣ್ಣ ಈಗಾಗಲೇ ಜಾಮೀನು ಪಡೆದ ಜೈಲಿನಿಂದ ಹೊರಬಂದಿದ್ದಾರೆ. ರೇವಣ್ಣ ಮೇಲೆ ಕೇಳಿ ಬಂದಿರುವ ಅಪಹರಣ ಪ್ರಕರಣದಲ್ಲಿ ಕುಮ್ಮಕ್ಕು ಕೊಟ್ಟ ಆರೋಪ ಭವಾನಿ ಮೇಲಿದೆ. ಇದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭವಾಣಿ ರೇವಣ್ಣ ಅವರಿಗೂ ಎಸ್.ಐ.ಟಿ 2 ಬಾರಿ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಭವಾನಿ ರೇವಣ್ಣ 2 ನೋಟಿಸ್ ಗೂ ವಿಚಾರಣೆಗೆ ಹಾಜರಾಗಿರಲ್ಲಿಲ್ಲ. ಇದೆ ಕಾರಣದಿಂದಾಗಿ ಈಗ ಅವರಿಗೂ ಬಂಧನದ ಭಯ ಶುರುವಾಗಿದೆ. ಆದ್ದರಿಂದ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಸಂತ್ರಸ್ತೆಯ ಅಪಹರಣ ಪ್ರಕರಣದ 2ನೇ ಆರೋಪಿ ಸತೀಶ್ ಬಾಬು ಮೊಬೈಲ್ ವಶಕ್ಕೆ ಪಡೆದು ಮಾಹಿತಿ ಕಲೆ ಹಾಕಿದಾಗ, ಭವಾನಿ ರೇವಣ್ಣ ಮತ್ತು ಸತೀಶ್ ಬಾಬು ಸಂಭಾಷಣೆ ನಡೆಸಿರುವ ಸುಳಿವು ಸಿಕ್ಕಿತ್ತು.
https://epaper.udayavani.com/t/8040
ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ರೇವಣ್ಣ…
ಮಾಜಿ ಸಚಿವ, ಹೊಳೆನರಸೀಪುರದ ಶಾಸಕರಾದ ಎಚ್.ರೇವಣ್ಣರವರು ಸೋಮವಾರ ಬೆಳಿಗ್ಗೆ ಧರ್ಮಸ್ಥಳಕ್ಕೆ ಭೇಟಿ ಮಾಡಿ ಮಂಜುನಾಥನ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕ್ಷೇತ್ರದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು. ರೇವಣ್ಣ ಭಾನುವಾರ ರಾತ್ರಿಯೇ ಹಾಸನದಿಂದ ಧರ್ಮಸ್ಥಳಕ್ಕೆ ಆಗಮಿಸಿ ಸನ್ನಿಧಿ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ತಮ್ಮ ಹೆಸರಲ್ಲಿ ಸಂಕಲ್ಪ ಮಾಡಿದ ಅವರು ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುಮಾರು 20 ನಿಮಿಷಗಳ ಕಾಲ ಮಂಜುನಾಥ ಸ್ವಾಮಿ ಹಾಗೂ ಅಮ್ಮನವರ ಮುಂಧೆ ಧ್ಯಾನಿಸಿದರು.
ಎಲ್ಲದಕ್ಕೂ ಉತ್ತರ ಸಿಗಲಿದೆ: ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ಕಳೆದ 40 ವರ್ಷಗಳಿಂದ ರಾಜಕರಾಣದಲ್ಲಿದ್ದೇನೆ. 25 ವರ್ಷಗಳಿಂದ ಶಾಸಕನಾಗಿದ್ದೇನೆ. ನನಗೆ ಕಾನೂನಿನ ಬಗ್ಗೆ ಗೌರವ ಇದೆ. ದೇವರ ಬಗ್ಗೆ ನಂಬಿಕೆ ಇದೆ. ಈ ಹಿಂದಿನಿಂದಲೂ ಧರ್ಮಸ್ಥಳಕ್ಕೆ ಬರುತ್ತಿದ್ದೇನೆ. ಇತರ ಕ್ಷೇತ್ರಗಳಿಗಿಂತ ಹೆಚ್ಚು ಭಕ್ತಿ ಮಂಜುನಾಥ ಸ್ವಾಮಿಯ ಮೇಲಿಯೇ ಇದೆ. ಸೋಮವಾರ ಶಿವನಿಗೆ ವಿಶೇಷವಾಗಿದ್ದರಿಂದ ಧರ್ಮಸ್ಥಳಕ್ಕೆ ಬಂದಿದ್ದೇನೆ. ರಾಜ್ಯದ ಜನತೆ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್, ತಿಮಿಂಗಿಲನ್ನು ಪಕ್ಕದಲ್ಲೇ ಕೂರಿಸಿಕೊಂಡಿದ್ದಾರೆ – ಎಚ್.ಡಿ.ಕೆ
ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದ ಮಹಿಳೆ ಸಾವು….!
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರವರು ನನ್ನ ಅಪ್ರಾಪ್ತ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ 53 ವರ್ಷದ ಮಹಿಳೆ ನಗರದ ಆಸ್ಪತ್ರೆಯೊಂದರಲ್ಲಿ ಭಾನುವಾರ ರಾತ್ರಿ ಮೃತಪಟ್ಟಿದ್ದಾಳೆ. ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಈ ಮಹಿಳೆಯು ಭಾನುವಾರ ಸಂಜೆ ಆರೋಗ್ಯದಲ್ಲಿ ಸಮಸ್ಯೆಯಾಗಿದೆ. ಕೂಡಲೇ ಮಕ್ಕಳು, ಸಂಬಂಧಿಕರು, ಖಾಸಗಿ ಆಸ್ಪತ್ರೆಗೆ ದಾಖಲಸಿದ್ದಾರೆ. ರಾತ್ರಿ 9.30 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.
ಮಹಿಳೆ ನೀಡಿದ್ದ ದೂರು ಆಧರಿಸಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾ.14 ರಂದು ಸದಾಶಿವನಗರದ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ನಂತರ ತಮಗೆ ಜೀವ ಬೆದರಿಕೆ ಇರುವುದಾಗಿ ಮೃತ ಮಹಿಳೆ ಆರೋಪಿಸಿದ್ದರು. ಹೀಗಾಗಿ, ಅವರ ಮನಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಈ ಮಧ್ಯೆ ಮಹಿಳೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಅವರ ಸಾವಿನ ಬಗ್ಗೆ ಮಾಹಿತಿ ಮಾತ್ರ ಸಂಗ್ರಹಿಸಲಾಗಿದೆ. ಮಕ್ಕಳು, ಸಂಬಂಧಿಕರಾಗಲಿ ಯಾರೊಬ್ಬರು ಮಹಿಳೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಿಪಡಿಸಿ ಯಾವುದೇ ದೂರು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಹಾಸನ ಜಿಲ್ಲೆಯಲ್ಲಿ ಮನೆ ಮಾರಾಟಕ್ಕಿದೆ…!
ಹಾಸನದ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಈಗ ದಿಢೀರವಾಗಿ ಮನೆಗಳು ಮಾರಾಟಕ್ಕಿವೆ. ಅದರಲ್ಲೂ ಹೊಳೆನರಸೀಪುರ ಪಟ್ಟಣದಲ್ಲಂತೂ ಇಪ್ಪತ್ತಕ್ಕೂ ಹೆಚ್ಚು ಮನೆಗಳು ಅಚಾನಕ್ಕಾಗಿ ಖಾಲಿಯಾಗಿದ್ದು ‘ಮನೆ ಮಾರಾಟಕ್ಕಿದೆ’ ಎಂಬ ನಾಮಫಲಕಗಳು ರಾರಾಜಿಸತೊಡಗಿವೆ. ಇನ್ನೊಂದಷ್ಟು ಮಂದಿ ಸಂತ್ರಸ್ತೆಯರು ಹುಟ್ಟೂರು ಬಿಟ್ಟು ಬೇರೆಲ್ಲೋ ಹೋಗಿದ್ದಾರೆನ್ನಲಾಗಿದ್ದು ಬಹುತೇಕರ ಮೊಬೈಲಗಳು ಸ್ವಿಚ್ ಆಫ್ ಆಗಿವೆ.
ಹಾಸನದ ಪೆನ್ಡ್ರೈವ್ ನಲ್ಲಿ ಚಿತ್ರಿತರಾಗಿರುವ ಬಹುತೇಕ ಹೆಣ್ಣುಮಕ್ಕಳು ಗೃಹಿಣಿಯರೆನ್ನಲಾಗಿದೆ. ಅಷ್ಟೇ ಅಲ್ಲದೆ ಬಹುತೇಕರು ಜೆಡಿಎಸ್ ಪಕ್ಷದವರೆನ್ನಲಾಗಿದೆ. ಪಕ್ಷದ ವೇದಿಕೆಯಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದ ಕಾರ್ಯಕರ್ತೆಯರು, ಮುಖಂಡರ ಪತ್ನಿಯರು, ಕೆಳಹಂತದ ಮಹಿಳಾ ಸಂಘಟಕರೇ ಸಂತ್ರಸ್ತೆಯರಾಗಿದ್ದಾರೆ.ಮೂರಕ್ಕೂ ಹೆಚ್ಚು ಆತ್ಮಹತ್ಯಾ ಯತ್ನ ಪ್ರಯತ್ನಗಳು ನಡೆದಿದ್ದಾವೆ ಎನ್ನಲಾಗುತ್ತಿದೆ.