ದ್ವಿತೀಯ ಪಿಯುಸಿ ಪರೀಕ್ಷೆ-3: ಯಾವಾಗ? ದ್ವಿತೀಯ ಪಿಯುಸಿ ಪರೀಕ್ಷೆ:2ರ ಫಲಿತಾಂಶ ಪ್ರಕಟ! When 2nd puc exam 3 will start?

2024ರ ದ್ವಿತೀಯ ಪಿಯುಸಿ ಪರೀಕ್ಷೆ-2ನ್ನು ದಿನಾಂಕ : 29-04-2024 ರಿಂದ 16-05-2024 ರವರೆಗೆ ನಡೆಸಲಾಗಿತ್ತು. ಈ ಪರೀಕ್ಷೆಯ ಫಲಿತಾಂಶವು ದಿನಾಂಕ : 21-05-2024 ರಂದು ಮಧ್ಯಾಹ್ನ 3:00 ಘಂಟೆಗೆ ಪ್ರಕಟಗೊಂಡಿದೆ. ದ್ವಿತೀಯ ಪಿಯುಸಿ ಪರೀಕ್ಷೆ-2ರ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು, ಮರುಎಣಿಕೆ ಹಾಗೂ ಮರುಮೌಲ್ಯಮಾಪನಕ್ಕಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದು ದ್ವಿತೀಯ ಪಿಯುಸಿ ಪರೀಕ್ಷೆ-2ನ್ನು ಬರೆದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ-1ನ್ನು ಬರೆದ ವಿದ್ಯಾರ್ಥಿಗಳಿಗೆ ಅವಕಾಶ ಇರುವುದಿಲ್ಲ.

ದ್ವಿತೀಯ ಪಿಯುಸಿ ಪರೀಕ್ಷೆ-3ನ್ನು ಬರೆಯಲು ಯಾರು ಅರ್ಹರು?

  • 2024ರ ಪರೀಕ್ಷೆ-1 ಮತ್ತು 2ರಲ್ಲಿ ಉತ್ತೀರ್ಣರಾಗಿದ್ದು ಫಲಿತಾಂಶ ಉತ್ತಮಪಡಿಸಿಕೊಳ್ಳಲು 2024ರ ದ್ವಿತೀಯ ಪಿಯುಸಿ ಪರೀಕ್ಷೆ-3ನ್ನು ಬರೆಯಲು ಇಚ್ಛಿಸಿದ್ದಲ್ಲಿ, ಅಂತಹ ವಿದ್ಯಾರ್ಥಿಗಳು ಫಲಿತಾಂಶ ಪಟ್ಟಿಯ ಆಧಾರದ ಮೇಲೆ ಕಾಲೇಜಿನ ಪ್ರಾಚಾರ್ಯರ ಮೂಲಕ ಹೆಸರನ್ನು ನೊಂದಾಯಿಸಬಹುದು ಅಥವಾ ಶಾಲಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಆನಲೈನ್ ಮುಖಾಂತರವು ಪರೀಕ್ಷೆ-3ಕ್ಕೆ ನೊಂದಾಯಿಸಿಕೊಳ್ಳುವುದಕ್ಕೆ ಅವಕಾಶ ಮಾಡಿದೆ. 2024ರ ಮೊದಲಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಅವಕಾಶವಿರುವುದಿಲ್ಲ.
  • ಪರೀಕ್ಷೆ-1ಕ್ಕೆ ಮತ್ತು ಪರೀಕ್ಷೆ-2ಕ್ಕೆ ನೊಂದಾಯಿಸಿಕೊಂಡು ಕಾರಣಾಂತರಗಳಿಂದ ಪರೀಕ್ಷೆಗೆ ಹಾಜರಾಗದೇ ಗೈರಾಗಿ ಉಳಿದ ವಿದ್ಯಾರ್ಥಿಗಳು ಪರೀಕ್ಷೆ-3ಕ್ಕೆ ನೊಂದಾಯಿಸಿಕೊಳ್ಳಬಹುದು.
  • 2024ನೇ ಸಾಲಿಗಿಂತ ಹಿಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆನಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಅಂತಹ ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿಯೇ ಅರ್ಜಿ ಸಲ್ಲಿಸಿ ಪರೀಕ್ಷೆ-3ಕ್ಕೆ ನೊಂದಾಯಿಸಿಕೊಳ್ಳಬಹುದು.

ದ್ವಿತೀಯ ಪಿಯುಸಿ ಪರೀಕ್ಷೆ-2ರ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ, ಮರುಎಣಿಕೆ ಹಾಗೂ ಮರುಮೌಲ್ಯಮಾಪನಕ್ಕಾಗಿ ಅರ್ಜಿ ವಿದ್ಯಾರ್ಥಿಗಳಿಗೆ ಸೂಚನೆಗಳು!

  1. ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿಗಳಿಗೆ ಅರ್ಜಿ ಸಲ್ಲಿಸಿ ಪಡೆದ ವಿಷಯಗಳಿಗೆ ಮಾತ್ರ ಮರುಮೌಲ್ಯಮಾಪನ/ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  2. ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿರುವ ವಿಷಯಗಳಿಗೆ ಮರು ಎಣಿಕೆಗೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
  3. ಆನಲೈನನಲ್ಲಿಯೇ ಅರ್ಜಿ ಸಲ್ಲಿಸಬೇಕು, ಅದನ್ನು ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
  4. ನಿಗದಿಯಾಗಿರುವ ಶುಲ್ಕವನ್ನು ಆನಲೈನ್ ಮೂಲಕ ಪಾವತಿಸಲು ಅವಕಾಶವಿರುತ್ತದೆ. ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಶಾಖೆಯ ಮೂಲಕ ಆಪಲೈನ್ ಚಲನ್ ಮೂಲಕ ಶುಲ್ಕ ಪಾವತಿಸಲು ಅವಕಾಶವಿದೆ.
  5. ಸರ್ಕಾರದ ಆದೇಶದಂತೆ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಪ್ರತಿ ವಿಷಯಕ್ಕೆ 530/-ರೂ. ಹಾಗೂ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಪ್ರತಿ ವಿಷಯಕ್ಕೆ 1670/-ರೂಗಳನ್ನು ನಿಗದಿ ಮಾಡಲಾಗಿದೆ. ಅಂಕಗಳ ಮರುಎಣಿಕೆಗಾಗಿ ಯಾವುದೇ ಶುಲ್ಕ ಇರುವುದಿಲ್ಲ.
  6. ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸುವ ದಿನಾಂಕ : 21-05-2024 ರಿಂದ 23-05-2024ರವರೆಗೆ, ಸ್ಕ್ಯಾನ್ಡ್ ಪ್ರತಿ ಡೌನ್ ಲೋಡ್ ಮಾಡಿಕೊಳ್ಳಲು ದಿನಾಂಕ 22-05-2024 ರಿಂದ 24-05-2024ರವರೆಗೆ, ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಹಾಗೂ ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು (ಸ್ಕ್ಯಾನ್ಡ್ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಅವಕಾಶ) ದಿನಾಂ : 22-05-2024 ರಿಂದ 25-05-2024 ರವರೆಗೆ ಇದೆ.

ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ವೆಬ್ ಸೈಟ್ https://kseab.karnataka.gov.in ರಲ್ಲಿನ ಮುಖಪುಟದಲ್ಲಿ (HOME PAGE) ದಲ್ಲಿ APPLICATION FOR SCANNED COPIES, RE-VALUATION/RE-TOTALING ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ CALENDER OF EVENTS ಪುಟು ತೆರೆಯುತ್ತದೆ. ಇದರಲ್ಲಿ “HOW TO APPLY”ಅನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳಿ, ತಂದನಂತರ 2024ರ ದ್ವಿತೀಯ ಪಿಯುಸಿ ಪರೀಕ್ಷೆ-2ರ ನೋಂದಣಿ ಸಂಖ್ಯೆಯನ್ನು ಪ್ರವೇಶ ಪತ್ರದಲ್ಲಿರುವಂತೆ ನಮೂದಿಸಿದ ನಂತರ ವಿದ್ಯಾರ್ಥಿಗಳ ಮಾಹಿತಿ ತೋರಿಸುತ್ತದೆ. SCANNED COPY ಪಡೆಯಲು ಬಯಸಿದ ವಿಷಯ ಅಥವಾ ವಿಷಯಗಳನ್ನು ಒಂದೇ ಬಾರಿಗೆ ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಯ ಮತ್ತು ಪೋಷಕರ ಮಾಹಿತಿ, ಮೋಬೈಲ್ ಸಂಖ್ಯೆ, ಈ-ಮೇಲ್ ಐ.ಡಿ ಹಾಗೂ ಸ್ವ-ವಿಳಾಸವನ್ನು ನಮೂದಿಸಿ ನಂತರ Submit ಬಟನ್ ಕ್ಲಿಕ್ ಮಾಡಿದ ನಂತರ ಚಲನ್ ಸಂಖ್ಯೆಯು Auto-Generate ಆಗುತ್ತದೆ. ‘Make Payment’ ಬಟನ್ ಕ್ಲಿಕ್ ಮಾಡಿದ ನಂತರ ‘Cash Payment’ ಅಥವಾ ‘Online Payment’ ನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ.

ಮರು ಎಣಿಕೆಗಾಗಿ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳು

  • ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿಯನ್ನು ಪಡೆದುಕೊಂಡು ಅದನಂತರವೇ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸ ಇದ್ದಲ್ಲಿ ಮಾತ್ರ ಮರುಎಣಿಕೆಗಾಗಿ ಅರ್ಜಿ ಸಲ್ಲಿಸಬೇಕು. ಮರುಎಣಿಕೆಗೆ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
  • ಮೌಲ್ಯಮಾನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅನುಸರಿಸಿದ ಕ್ರಮವನ್ನೇ ಮರುಮೌಲ್ಯಮಾನಕ್ಕೂ ಅನುಸರಿಸಬೇಕು. ಮರುಎಣಿಕೆಗೆ ಚಲನ್ ಡೌನಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ. ಮುಂದಿನ ಉಪಯೋಗಕ್ಕಾಗಿ ಮತ್ತು ವಿದ್ಯಾರ್ಥಿಯ ಮಾಹಿತಿಗಾಗಿ ಚಲನ್ ಸಂಖ್ಯೆ ವಿದ್ಯಾರ್ಥಿಯು ಒದಗಿಸಿದ ಮೋಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಮೂಲಕ ಬರುತ್ತದೆ.
  • ಮರುಎಣಿಕೆಯ ಫಲಿತಾಂಶವನ್ನು ಶಾಲಾ ಶಿಕ್ಷಣ ಇಲಾಖೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಅಂತರ್ಜಾಲದಲ್ಲಿ ಪ್ರಕಟಿಸುತ್ತಾರೆ.
  • ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸುವವರು ಮರುಎಣಿಕೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳು

  • ಸ್ಕ್ಯಾನ್ಡ್ ಪ್ರತಿಯನ್ನು ಪಡೆದುಕೊಂಡು ಪರಿಶೀಲಿಸಿದ ನಂತರ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು.
  • ಮೌಲ್ಯಮಾಪನದಲ್ಲಿ ಪಡೆದ ಅಂಕಗಳಿಗಿಂತ ಮರುಮೌಲ್ಯಮಾಪನದಲ್ಲಿ ಒಂದು ಅಂಕ ಅಥವಾ ಒಂದಕ್ಕಿಂತ ಅಂಕಗಳು ಹೆಚ್ಚಾದಲ್ಲಿ/ಕಡಿಮೆಯಾದಲ್ಲಿ ಮರುಮೌಲ್ಯಮಾನದಲ್ಲಿ ಪಡೆದ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಯು ಮೊದಲು ಪಡೆದ ಅಂಕಗಳನ್ನು ಮರುಸ್ಥಾಪಿಸಲು ಅವಕಾಶ ಇಲ್ಲ.
  • ಮರು ಮೌಲ್ಯಮಾಪನದ ಬಗ್ಗೆ ಮರುಮೌಲ್ಯಮಾಪಕರ ಸಮಿತಿಯು ತೆಗೆದುಕೊಂಡ ನಿರ್ಧಾರವೇ ಅಂತೀಮ. ಇದರ ಮೇಲೆ ಮರುಪರಿಶೀಲನೆ ಅಥವಾ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ.
  • ಮರುಮೌಲ್ಯಮಾಪನ ಅಥವಾ ಮರುಎಣಿಕೆ ಕೆಲಸ ಮುಗಿದ ನಂತರ ಫಲಿತಾಂಶವನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಜಾಲತಾಣವನ್ನು ನೋಡಬಹುದು. https://kseab.karnataka.gov.in ನ ಅಂತರ್ಜಾಲದಲ್ಲಿ ವೀಕ್ಷಿಸಬಹುದು.

ಜೂನ್/ಜುಲೈ 2024ರ ದ್ವಿತೀಯ ಪಿಯುಸಿ ಪರೀಕ್ಷೆ-3ರ ಅಂತಿಮ ವೇಳಾಪಟ್ಟಿ

  • ದಿನಾಂಕ ಮತ್ತು ವಾರ                         ವಿಷಯ          
  • 24-06-2024 ಸೋಮವಾರ                 ಕನ್ನಡ&ಅರೇಬಿಕ್
  • 25-06-2024 ಮಂಗಳವಾರ                 ಇಂಗ್ಲೀಷ
  • 26-06-2024 ಬುಧವಾರ , ಸಮಾಜಶಾಸ್ತ್ರ,ಜೀವಶಾಸ್ತ್ರ,ಭೂಗೋಳಶಾಸ್ತ್ರ,ವಿದ್ಯುನ್ಮಾನಶಾಸತ್ರ,ಗಣಕ ವಿಜ್ಞಾನ
  • 27-06-2024 ಗುರುವಾರ                    ಐಚ್ಛಿಕ ಕನ್ನಡ&ಲೆಕ್ಕಶಾಸ್ತ್ರ
  • 28-06-2024 ಶುಕ್ರವಾರ                     ಅರ್ಥಶಾಸ್ತ್ರ & ರಸಾಯನಶಾಸ್ತ್ರ
  • 29-06-2024 ಶನಿವಾರ                      ಇತಿಹಾಸ & ಭೌತಶಾಸ್ತ್ರ
  • 30-06-2024                                 ಭಾನುವಾರ ರಜಾ ದಿನ
  • 01-07-2024 ಸೋಮವಾರ                 ಗೃಹವಿಜ್ಞಾನ,ರಾಜ್ಯಶಾಸ್ತ್ರ,ಸಂಖ್ಯಾಶಾಸ್ತ್ರ
  • 02-07-2024 ಮಂಗಳವಾರ                 ತರ್ಕಶಾಸ್ತ್ರ,ವ್ಯವಹಾರ ಅಧ್ಯಯನ,ಗಣಿತ,ಶಿಕ್ಷಣಶಾಸ್ತ್ರ
  • 03-07-2024 ಬುಧವಾರ                     ಭೂಗೋಳಶಾಸ್ತ್ರ, ಮನಃಶಾಸ್ತ್ರ,ಮೂಲಗಣಿತ
  • 04-07-2024 ಗುರುವಾರ                    ಹಿಂದಿ
  • 05-07-2024 ಶುಕ್ರವಾರ                     ತಮಿಳು,ತೆಲುಗು,ಮಲಯಾಳಂ,ಮರಾಠಿ,ಉರ್ದು,ಸಂಸ್ಕೃತ,ಪ್ರೆಂಚ್
  •                                                 ಹಿಂದೂಸ್ತಾನಿ ಸಂಗೀತ, ಐ.ಟಿ., ರಿಟೈಲ್, ಆಟೋಮೋಬೈಲ್,ಬಿ&ಡಬ್ಲ್ಯೂ

ದ್ವಿತೀಯ ಪಿಯುಸಿ ಪರೀಕ್ಷೆ-3 ಪರೀಕ್ಷೆಯು ಸಹ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಲಿದೆ? II PUC-3 exam ALSO to be held under CCTV camera surveillance?

ಈಗಾಗಲೇ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-2 ನ್ನು ವೆಬ್ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಸಿ ಇಲಾಖೆಯು ಯಶಸ್ವಿಯಾಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವೆಬ್ ಕ್ಯಾಮೆರಾ ಪರಿಣಾಮದಿಂದಾಗಿ ಪರೀಕ್ಷೆಯಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ತಡೆಯಲು ಸಹಾಯಕವಾಗಿತ್ತು. ಇದರಿಂದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ವಿದ್ಯಾರ್ಥಿಗಳ ಅನುತ್ತೀರ್ಣ ಪ್ರಮಾಣ ಹೆಚ್ಚಾಗಿತ್ತು. ಆದ್ದರಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ ಕೊಡುವುದರ ಮೂಲಕ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣಮಾಡಿ ಇಲಾಖೆಯು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿತು.

          ಅದೆ ಪ್ರಕಾರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ-2ನ್ನು ವೆಬ್ ಕ್ಯಾಮೆರಾ ಮೂಲಕ ನಡೆಸಿದರು.ಪರೀಕ್ಷೆ-2ಕ್ಕೆ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಉತ್ತಮಗೊಳಿಸಲು ಅವಕಾಶ ಕಲ್ಪಿಸಲಾಗಿತ್ತು. ಅದೆ ಪ್ರಕಾರವಾಗಿ ಇಲಾಖೆಯು ಪರೀಕ್ಷೆ-2ನ್ನು ಯಾವುದೇ ಅವ್ಯವಹಾರ ನಡೆಸದೆ ಪರೀಕ್ಷೆಯನ್ನು ಯಶಸ್ವಿಗೊಳಿಸಿತು. ಪರೀಕ್ಷೆ-2ರ ಫಲಿತಾಂಶವನ್ನು ಗಮನಿಸಿದಾಗ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಯಾವುದೇ ರೀತಿಯ ಏರಿಕೆಯಾಗಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ವೆಬ್ ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ಬರೆಯುವುದರಿಂದ ಯಾವುದೇ ರೀತಿಯ ಅವ್ಯವಹಾರ ನಡೆಯದೇ, ಕೇವಲ ಓದಿದ ಮಕ್ಕಳಿಗೆ ಅಂಕಗಳು ದೊರೆಯಲು ಸಹಾಯಕವಾಗಿದೆ. ಈಗ ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಕೂಡ ವೆಬ್ ಕ್ಯಾಮರ್ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಜಾಲತಾಣವನ್ನು ನೋಡಬಹುದು. https://kseab.karnataka.gov.in

https://www.kannadaprabha.com

One thought on “ದ್ವಿತೀಯ ಪಿಯುಸಿ ಪರೀಕ್ಷೆ-3: ಯಾವಾಗ? ದ್ವಿತೀಯ ಪಿಯುಸಿ ಪರೀಕ್ಷೆ:2ರ ಫಲಿತಾಂಶ ಪ್ರಕಟ! When 2nd puc exam 3 will start?

Leave a Reply

Your email address will not be published. Required fields are marked *